Ticker

6/recent/ticker-posts

Ad Code

ಅನಂತಪುರ ಕ್ಷೇತ್ರ ಸಮೀಪ ತ್ಯಾಜ್ಯ ಚೆಲ್ಲುವ ಪ್ಯಾಕ್ಟರಿಗಳ ವಿರುದ್ಧ ಕ್ರಮಕ್ಕೆ ಹಿಂದೂ ಐಕ್ಯವೇದಿ ಆಗ್ರಹ

 

ಕುಂಬಳೆ : ಇತಿಹಾಸ ಪ್ರಸಿದ್ಧ ತಟಾಕ ಕ್ಷೇತ್ರವೆಂಬ ವಿಶೇಷಣಗಳಿಂದ ಗುರುತಿಸಲ್ಪಟ್ಟಿರುವ ಅನಂತಪುರ ಕ್ಷೇತ್ರ ಪರಿಸರದಲ್ಲಿ ತ್ಯಾಜ್ಯಗಳನ್ನು ಉಪೇಕ್ಷಿಸುವ ಪ್ಯಾಕ್ಟರಿಗಳನ್ನು ಶಾಶ್ವತ ಮುಚ್ಚುವ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಪ್ರ. ಸಂಚಾಲಕ ಗಿರಿ ವೀರನಗರ್ ಒತ್ತಾಯಿಸಿದ್ದಾರೆ. ಇಲ್ಲಿ ಕೋಳಿ ಹಾಗೂ ಇನ್ನಿತರ ಸಾಕು ಪ್ರಾಣಿಗಳಿಗೆ ಆಹಾರ ತಯಾರಿಸುವ ಎರಡು ಮೂರು ಪ್ಯಾಕ್ಟರಿಗಳಿದ್ದು ಇದರಿಂದ ಚೆಲ್ಲುವ ತ್ಯಾಜ್ಯ ಕ್ಷೇತ್ರ ಪರಿಸರವನ್ನು ಮಾಲಿನ್ಯಗೊಳಿಸುತ್ತಿದೆ. ಹಿಂದೂ ಧಾರ್ಮಿಕ ಭಾವನೆಗೆ ಅಸಹ್ಯವೆನಿಸುವ ಈ ಕೇಂದ್ರಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅಗ್ರಹಿಸಿ ಧರಣಿ ಹೋರಾಟಗಳು ನಡೆಯುತ್ತಿವೆ. ಆದರೆ ಅಧಿಕಾರಿಗಳು ಯಾವುದೇ ಕ್ರಮಕ್ಕೂ ಮುಂದಾಗಿಲ್ಲ ಈ ಬಗ್ಗೆ ಇನ್ನಷ್ಟು ಹೋರಾಟ ತೀವ್ರಗೊಳಿಸಲು ಬೆಂಬಲ ಸೂಚಿಸಿರುವುದಾಗಿ  ಐಕ್ಯವೇದಿ ತಿಳಿಸಿದೆ.

Post a Comment

0 Comments