ಕಾಸರಗೋಡು : ಚಲಿಸುತ್ತಿದ್ದ ರೈಲಿನಿಂದ ಬಿದ್ದ ಅನ್ಯ ರಾಜ್ಯ ಕಾರ್ಮಿಕನೋರ್ವ ಚಿಕಿತ್ಸೆಗೆ ಕೊಂಡೊಯ್ಯುವಾಗ ಪರಾರಿಯಾಗಲೆತ್ನಿಸಿದ ಘಟನೆ ತ್ರಿಕ್ಕರಿಪ್ಪುರದಲ್ಲಿ ನಡೆದಿದೆ. ಗಾಯಗೊಂಡ ಕಾರ್ಮಿಕನನ್ನು ಉತ್ತರ ಪ್ರದೇಶ ನಿವಾಸಿ ದಿಲೀಪ್ ಸರ್ಕಾರ್ (35) ಎಂದು ಗುರುತಿಸಲಾಗಿದೆ. ಈತನನ್ನು ರೈಲ್ವೆ ನಿರ್ವಹಣಾ ಕಾರ್ಮಿಕರು ಮತ್ತು ಸ್ಥಳೀಯರು ಆಂಬ್ಯುಲೆನ್ಸ್‌ಗೆ ಹತ್ತಿಸುವಾಗ ಭಯಭೀತನಾಗಿ ಪರಾರಿಗೆತ್ನಿಸಿದ್ದ. ಆಂಬ್ಯುಲೆನ್ಸ್‌ನಿಂದ ಇಳಿದು ಓಡಿಹೋದ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಪೆರಿಯಾರಂ ಕಣ್ಣೂರು ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.

0 Comments