ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆಯಿಂದ ನಿವೃತ್ತಿಗೊಳ್ಳುತ್ತಿರುವ ಸಬ್ ಇನ್ಸ್‌ಪೆಕ್ಟರ್ ಸಿ.ಎಂ. ಥಾಮಸ್ ಮೇ 31 ರಂದು ತಮ್ಮ ಔದ್ಯೋಗಿಕ ಜೀವನದಿಂದ ನಿವೃತ್ತರಾಗಲಿದ್ದಾರೆ. ಇದರಂಗವಾಗಿ ಅವರಿಗೆ ಬದಿಯಡ್ಕ ಠಾಣೆಯಲ್ಲಿ ಬೀಳ್ಕೊಡುಗೆ ಸಭೆ ನಡೆಯಿತು. ಸ್ಟೇಷನ್ ಹೌಸ್ ಆಫೀಸರ್ ಆರ್.ಪಿ. ಅನೂಪ್ ಕೃಷ್ಣ ಉದ್ಘಾಟಿಸಿ, ನಿವೃತ್ತಿಗೊಳ್ಳುತ್ತಿರುವ ಸಬ್ ಇನ್ಸ್‌ಪೆಕ್ಟರ್ ಥಾಮಸ್ ಅವರನ್ನು ಸನ್ಮಾನಿಸಿದರು. ಸ್ಟೇಷನ್ ಸಬ್ ಇನ್ಸ್‌ಪೆಕ್ಟರ್ ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಸ್‌ಐ ಫಿಲಿಪ್ ಥಾಮಸ್, ಸ್ಟೇಷನ್ ರೈಟರ್ ಪಿ. ಮನೋಜ್ ಮತ್ತು ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಎಸ್. ಐ. ಸುಕುಮಾರನ್ ಅವರ ಪುತ್ರ ಅವೇದ್ ಮತ್ತು ಸಿವಿಲ್ ಪೊಲೀಸ್ ಅಧಿಕಾರಿ ಶಿಬಿನ್ ಅವರ ಪುತ್ರಿ ಶಿಖಾ ಶಾ ಅವರನ್ನು ಸನ್ಮಾನಿಸಲಾಯಿತು. ಸಬ್ ಇನ್ಸ್‌ಪೆಕ್ಟರ್ ಇ. ಸುಕುಮಾರನ್ ಸ್ವಾಗತಿಸಿದರು.

0 Comments