Ticker

6/recent/ticker-posts

Ad Code

ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಗೃಹಿಣಿ ಮೃತ್ಯು

 

ನೀರ್ಚಾಲು : ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಗೃಹಿಣಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ನೀರ್ಚಾಲು ಸಮೀಪದ ಕಡಂಬಳದ ಸರೋಜಿನಿ (69) ನಿಧನರಾದ ಮಹಿಳೆ. ಅನಾರೋಗ್ಯ ಉಲ್ಬಣಗೊಂಡು ಕಾಸರಗೋಡಿನ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದರು.  ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಅನುಭವಿಸಿ ಚಿಕಿತ್ಸೆಯ ನಡುವೆ ನಿಧನರಾದರು. ಮೃತರು ಪತಿ ಬಾಲನ್  ಮಕ್ಕಳಾದ ಶ್ರೀದೇವಿ, ಶ್ರೀಕುಮಾರ್ ಮತ್ತು ಸಂತೋಷ್ ಮತ್ತು  ಅಳಿಯಂದಿರಾದ ಹರಿಪ್ರಸಾದ್ ಕುಂಟಗೇರಡ್ಕ, ಸೊಸೆ ಗೀತಾ ಮತ್ತು ಸುನೀತಾ ಎಂಬಿವರನ್ನಗಲಿದ್ದಾರೆ.

Post a Comment

0 Comments