Ticker

6/recent/ticker-posts

Ad Code

ಪ್ಲಸ್ ವನ್ ಏಕ ಜಾಲ ಪ್ರವೇಶಕ್ಕಾಗಿ ಇಂದು ರಾತ್ರಿಯಿಂದ ಆನ್‌ಲೈನ್ ಅರ್ಜಿ ಸ್ವೀಕಾರ

ತಿರುವನಂತಪುರ : ಪ್ಲಸ್  ವನ್ ಏಕ ಜಾಲ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ ಸೋಮವಾರ (ಇಂದು) ರಾತ್ರಿಯಿಂದ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳು ಅಧಿಕೃತ HSCAP (https://hscap.kerala.gov.in) ಮೂಲಕ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಹೈಯರ್ ಸೆಕೆಂಡರಿ ಶಾಲೆಗಳಿಗೆ ಪ್ರವೇಶಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಶಿಕ್ಷಣ ಇಲಾಖೆಯಿಂದ ನಿರ್ವಹಿಸಲ್ಪಡುವ HSCAP ವ್ಯವಸ್ಥೆಯ ಮೂಲಕ, ಒಂದೇ ಅರ್ಜಿಯನ್ನು ಬಳಸಿಕೊಂಡು ಬಹು ಶಾಲೆಗಳು ಮತ್ತು ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಈ ಬಾರಿ ಪ್ಲಸ್ ಒನ್‌ನಲ್ಲಿ 3,60,844 ಸೀಟುಗಳು ಲಭ್ಯವಿದೆ. ಕಳೆದ ವರ್ಷ ಅರ್ಧ ಲಕ್ಷಕ್ಕೂ ಹೆಚ್ಚು ಸೀಟುಗಳು ಖಾಲಿ ಇದ್ದ ಹಿನ್ನೆಲೆಯಲ್ಲಿ, ಹಂಚಿಕೆ ಪ್ರಕ್ರಿಯೆಯನ್ನು ಪರಿಶೀಲಿಸಿದ ನಂತರ ಹೆಚ್ಚುವರಿ ಸೀಟುಗಳನ್ನು ಹಂಚಲಾಗುತ್ತದೆ. ಜೂನ್ 3ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Post a Comment

0 Comments