ತಿರುವನಂತಪುರ : ಶೌಚಾಲಯದ ತ್ಯಾಜ್ಯ ತೊಟ್ಟಿಯಲ್ಲಿ ಗುಪ್ತ ಕ್ಯಾಮೆರಾ ಮತ್ತು ಪವರ್ ಬ್ಯಾಂಕ್ ಇಟ್ಟು ಯುವತಿಯ ದೃಶ್ಯಗಳನ್ನು ಸೆರೆಹಿಡಿಯಲು ಯತ್ನಿಸಿದ ಪ್ರಕರಣದಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚೆಕ್ಕಾಲಮುಕ್ಕ್ ಮೂಲದ ರಾಹುಲ್ ಪಿ ಅಶೋಕ್ (38) ಎಂದು ಗುರುತಿಸಲಾಗಿದೆ. ತಿರುವನಂತಪುರದ ಶ್ರೀಕಾರ್ಯದಲ್ಲಿ ಆರೋಪಿಯ ಒಡೆತನದಲ್ಲಿರುವ ಮುದ್ರಣ ಸಂಸ್ಥೆಯ ಶೌಚಾಲಯದಲ್ಲಿ ಗುಪ್ತ ಕ್ಯಾಮೆರಾ ಪತ್ತೆಯಾಗಿದೆ.
ಗುಪ್ತ ಕ್ಯಾಮೆರಾ ಮತ್ತು ಪವರ್ ಬ್ಯಾಂಕನ್ನು ತ್ಯಾಜ್ಯ ತೊಟ್ಟಿಯಲ್ಲಿ ಇರಿಸಿರುವುದನ್ನು ಗಮನಿಸಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸಿದ್ದು, ನ್ಯಾಯಾಲಯ ಜಾಮೀನು ನಿರಾಕರಿಸಿತು. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದರು.

0 Comments