ಕಾಸರಗೋಡು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಾಸರಗೋಡು ತಾಲೂಕು ಇದರ ತಾಲೂಕು ವೇದಿಕೆ ಪದಾಧಿಕಾರಿಗಳ ಸಭೆಯು AKRDA ಭವನ್ ಸಭಾಂಗಣದಲ್ಲಿ ಕೋಶಾಧಿಕಾರಿ ಶರೀಫ್ ಕೊಡವಂಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ನಿರ್ದೇಶಕ ಬಾಬು ನಾಯ್ಕರವರು ಮಾತನಾಡುತ್ತಾ ಕಾಸರಗೋಡು ಭಾಗದಲ್ಲಿ ಹಲವಾರು ಶಿಬಿರಗಳು ನಡೆದಿದೆ ತುಂಬಾ ಜನ ಕುಡಿತ ಬಿಟ್ಟು ಪಾನಮುಕ್ತ ನವಜೀವನ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಮದ್ಯಮುಕ್ತ ಗ್ರಾಮ ಮಾಡುವ ಪ್ರಯತ್ನ ಮಾಡಬೇಕು ಎಂದರು. ತಾಲೂಕು ವೇದಿಕೆ ಅಧ್ಯಕ್ಷರಾದ ಅಖಿಲೇಶ್ ನಗುಮೊಗಂರವರ ಅವಧಿ ಸಂಪೂರ್ಣವಾಗಿರುವುದರಿಂದ ತಾಲೂಕು ವೇದಿಕೆಯ ಎಲ್ಲಾ ಪದಾಧಿಕಾರಿಗಳ ಸೂಚನೆಯಂತೆ ನೂತನವಾಗಿ ಜಯರಾಮ ಪಾಟಾಳಿಯವರನ್ನು ತಾಲೂಕು ವೇದಿಕೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿರುತ್ತಾರೆ. ಜನಜಾಗೃತಿ ವಿಭಾಗದ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯರವರು 2026-27ನೇ ಸಾಲಿನ ಕ್ರಿಯಾ ಯೋಜನೆಯ ಗುರಿ ಸಾಧನೆ ಕುರಿತು ಮಾಹಿತಿ ನೀಡಿದರು
ಸಭೆಯಲ್ಲಿ ಕಾಸರಗೋಡು ಯೋಜನಾ ಕಚೇರಿ ವ್ಯಾಪ್ತಿಯ ವಲಯವಾರು ಸಾಧನ ವರದಿಯನ್ನು ವಲಯದ ಮೇಲ್ವಿಚಾರಕರು ಮಂಡಿಸಿದರು. ಯೋಜನಾಧಿಕಾರಿ ದಿನೇಶ್ ಗತ ಸಭೆಯ ವರದಿ ಮಂಡಿಸಿದರು. ಬದಿಯಡ್ಕ ವಲಯ ಮೇಲ್ವಿಚಾರಕಿ ಸುಗುಣ ಹವಲ್ದಾರ್ ಸ್ವಾಗತಿಸಿ, ಕಾರಡ್ಕ ವಲಯದ ಮೇಲ್ವಿಚಾರಕ ಸುರೇಶ್ ವಂದಿಸಿದರು. ಕಾಸರಗೋಡು ವಲಯದ ಮೇಲ್ವಿಚಾರಕ ಗೋಪಾಲಕೃಷ್ಣ ನಿರೂಪಿಸಿದರು.

0 Comments