ಬದಿಯಡ್ಕ : ಬದಿಯಡ್ಕ ಗ್ರಾಮಪಂಚಾಯತಿನ 7ನೇ ಹಾಗೂ 9ನೇ ವಾರ್ಡಿನ ನೇತೃತ್ವದಲ್ಲಿ ಮಳೆಗಾಲಪೂರ್ವ ಸ್ವಚ್ಛತಾ ಅಭಿಯಾನ ಕಾರ್ಯ ನಡೆಯಿತು.
ಪಂ.ಸದಸ್ಯರಾದ ಮಧುಸೂದನ, ಲೀಲಾವತಿ, ಪಂಚಾಯತ್ ಹೆಲ್ತ್ ಇನ್ಸ್ಪೆಕ್ಟರ್ ಪಿ.ಕೆ. ಬಾಬುರಾಜ್, ಜ್ಯೂ.ಹೆಲ್ತ್ ಇನ್ಸ್ಪೆಕ್ಟರ್ ಸೂರಜ್, ಆಶಾ ಕಾರ್ಯಕರ್ತೆ ಲಲಿತಾ ಎ, ಮೊದಲಾದವರು ನೇತೃತ್ವವಹಿಸಿದ್ದರು. ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಹರಿತ ಕರ್ಮಸೇನೆ, ಉದ್ಯೋಗ ಖಾತರಿ ಕಾರ್ಮಿಕರು, ಎ.ಡಿ.ಎಸ್, ಸಿ.ಡಿ.ಎಸ್ ಸದಸ್ಯರು, ವ್ಯಾಪಾರಿಗಳು, ಸಮಾಜ ಸೇವಕರು ಮುಂತಾದವರು ಶುಚೀಕರಣದಲ್ಲಿ ಪಾಲ್ಗೊಂಡರು.

0 Comments