Ticker

6/recent/ticker-posts

Ad Code

ಪುಲ್ವಾಮಾ ದಾಳಿಯ ಪ್ರಧಾನ ಸೂತ್ರಧಾರ ಹಮ್ಜಾ ಬುರ್ಹಾನ್ ನನ್ನು ಗುಂಡಿಕ್ಕಿ ಹತ್ಯೆ

 

ನವದೆಹಲಿ: ಪುಲ್ವಾಮಾ ದಾಳಿಯ ಪ್ರಧಾನ ಸೂತ್ರಧಾರ ಹಮ್ಜಾ ಬುರ್ಹಾನ್ ನನ್ನು ಅಪರಿಚಿತ ಗನ್ ಮ್ಯಾನ್ ಗಳು ಗುಂಡಿಕ್ಕಿ ಹತ್ಯೆಗೈದಿರುವುದಾಗಿ ವರದಿಯಾಗಿದೆ. 2019 ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭೀಕರ ಆತ್ಮಾಹುತಿ ಉಗ್ರರ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದಿದ್ದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಈತ.  'ಡಾಕ್ಟರ್' ಎಂದು ಕರೆಯಲಾಗುತ್ತಿದ್ದ ಪುಲ್ವಾಮಾ ನಿವಾಸಿ ಹಮ್ಜಾ ಬುರ್ಹಾನ್ ನನ್ನು 2022 ರಲ್ಲಿ ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದಕ ಎಂದು ಘೋಷಿಸಿತ್ತು.

ಬುರ್ಹಾನ್ ಮೂಲ ಹೆಸರು ಅರ್ಜುಮಂದ್ ಗುಲ್ಜಾರ್ ದಾರ್. ಮುಜಫರಾಬಾದ್‌ನಲ್ಲಿ ಅಪರಿಚಿತ ದಾಳಿಕೋರರಿಂದ ದಾಳಿಗೊಳಗಾದ ನಂತರ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಹಮ್ಜಾ ಬುರ್ಹಾನ್, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

Post a Comment

0 Comments