Ticker

6/recent/ticker-posts

Ad Code

ಕಾಸರಗೋಡು ಬಂಟರ ಸಂಘದಲ್ಲಿ ಬಿರುಕು ಮೂಡಿಸಿದ ಗೌಪ್ಯ ಚಟುವಟಿಕೆಗಳು : ಒಡೆದು ಆಳುವ ನೀತಿಯ ಬಗ್ಗೆ ಪರ ವಿರೋಧ ಚರ್ಚೆಗಳು ಸಕ್ರಿಯ


ಕಾಸರಗೋಡು :  ಕಾಸರಗೋಡು ಬಂಟರ ಸಮುದಾಯಿಕ ಸಂಘಟನೆಯಲ್ಲಿ ಬಿರುಕು ಮೂಡಿತೇ...!?  ಹೌದು ಎನ್ನುವ ಪ್ರಕ್ರಿಯೆ ಈಗಿನ ವಾಸ್ತವಾಂಶದ ವಿದ್ಯಾಮಾನಗಳಲ್ಲಿ ಕಂಡು ಬರುತ್ತಿದೆ. ಸಾಮಾನ್ಯ ಜನರು ಸಮುದಾಯದ ಈ ಒಡಕಿನ ಬಗ್ಗೆ ಬಹಳ ಆತಂಕದಿಂದ ಮಾತನಾಡುವಂತಾಗಿದೆ ಮಾತ್ರವಲ್ಲ ಸಾಮಾಜಿಕ ಮಾಧ್ಯಮಗಳಾದ ವಾಟ್ಸಫ್ ಗ್ರೂಪ್ ಗಳಲ್ಲಂತೂ ಇದರ ಪರ ಮತ್ತು ವಿರೋಧ ಚರ್ಚೆಗಳು ಸಕ್ರಿಯವಾಗಿ ವೈರಲಾಗುತ್ತಿದೆ. ನಿಯಮಿತವಾಗಿ ನಡೆಯುತ್ತಿದ್ದ ಸಮಾಜಮುಖಿ ಕೆಲಸ ಕಾರ್ಯಗಳು ಇದೀಗ ಬೀದಿ ಬದಿ ಚರ್ಚೆಯಾಗುತ್ತಿರುವುದು ವಿಪರ್ಯಾಸಕರವಾದ ವಾತವರಣವಾಗಿದೆ ಎಂದು ಬಂಟ ಸಮುದಾಯದ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ. 

ಇತ್ತೀಚಿಗಿನ ದಿನಗಳಲ್ಲಿ ಸಮಾಜ ಸೇವಕ, ಕೊಡುಗೈ ದಾನಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ನೇತೃತ್ವದಲ್ಲಿ ಸಮಾಜದ ತಳಮಟ್ಟದ ಏಳಿಗೆಗೆಂದು ಬಂಟ ಸಂಘಟನೆಗೊಂದು ರೂಪುರೇಷೆ ನೀಡಲು  ಸಭೆ ನಡೆದಿದ್ದು ಅಂದಿನಿಂದ ಪರ - ವಿರೋಧ ಚರ್ಚೆಗಳು ನಡೆಯುತ್ತಿರುವುದು ಕಂಡು ಬರುತ್ತಿದೆ. 

ಈ ಹಿಂದಿನಿಂದಲೇ ಕಾಸರಗೋಡು ಬಂಟರ ಸಂಘ ಹಲವು ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಾ ಸ್ವಿತ್ವದಲ್ಲಿದ್ದು ಫಿರ್ಕಾ ಹಾಗೂ ಪ್ರತಿ ಪಂಚಾಯತ್ ನಲ್ಲೂ ಪಂಚಾಯತ್ ಸಮಿತಿಯನ್ನು ಹೊಂದಿತ್ತು. ಈ ವೇಳೆ ಸಮಾಜದ ಕೊಡುಗೈದಾನಿ ಎನಿಸಿದ ಕನ್ಯಾನ ಸದಾಶಿವ ಶೆಟ್ಟರು ಮತ್ತು ಅವರ ಬೆಂಬಲಿಗರಾದ ಅಭಿಮಾನಿಗಳು  ಕುಂಬಳೆಯ ನಾಯ್ಕಾಪಿನಲ್ಲೊಂದು  ಬಂಟರ ಭವನದ ಜತೆಗೆ ಕಛೇರಿಯನ್ನೊಳಗೊಂಡ ಕಟ್ಟಡ ಸಮುಚ್ಛಯವನ್ನು ನಿರ್ಮಿಸುವ ಯೋಜನೆ ಇರಿಸಿದ್ದರು, ಮಾತ್ರವಲ್ಲ ಇದಕ್ಕಾಗಿಯೇ ಪ್ರತ್ಯೇಕ ಸಮಿತಿಯೊಂದನ್ನು ರಚಿಸಿತ್ತು ಎಂದು ಹೇಳಲಾಗುತ್ತಿದೆ. 

ಕಾಸರಗೋಡು ಜಿಲ್ಲಾ ಬಂಟರ ಸಂಘಗಳ ಜತೆಗೆ ಎಲ್ಲಾ ಪಂಚಾಯತ್ ಸಮಿತಿಗಳನ್ನು ಒಗ್ಗಟ್ಟಿನಿಂದ ಮುನ್ನಡೆಸುವ ಹುಮ್ಮನಸಿನಿಂದ ಸ್ವತಃ ಸದಾಶಿವ ಶೆಟ್ಟರೇ ಹೆಚ್ಚಿನ ಮುತುವರ್ಜಿ ವಹಿಸಿ ಪ್ರತಿ ಪಂಚಾಯತಿನಲ್ಲೂ ಒಂದೊಂದು ಕಾರ್ಯಕ್ರಮ ಇಟ್ಟು ಐಕ್ಯತೆ ಪ್ರದರ್ಶಿಸಿ ಎಂದು ಕರೆ ಕೊಟ್ಟಿದ್ದರು. ಇದರಂತೆ ಹಲವೆಡೆ ನಡೆದ ವಿವಿಧ ಕಾರ್ಯಕ್ರಮಗಳಲ್ಲೂಸ್ವತಃ ಅವರೇ ತಮ್ಮ ಅಭಿಮಾನಿ ಗಡಣದ ಜತೆ ಭಾಗವಹಿಸಿದ್ದು ಹೆಚ್ಚಿನ ಪ್ರಚಾರ ಪಡೆದಿತ್ತು. ಇದರ ಬಳಿಕ   ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೂ ಇವರಿಗೂ  ಶೀತಲ ಸಮರ ನಡೆದಿತ್ತು. ಇವರ ನಡೆಯನ್ನು ಸಮರ್ಥಿಸಿಕೊಂಡು ಆಗ ಇದೇ ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರೇ ಸ್ವತಃ ಪತ್ರಿಕಾಗೋಷ್ಠಿಯಲ್ಲಿ ಕುಳಿತುಕೊಂಡು ಸದಾಶಿವ ಶೆಟ್ಟರ ಪರ ಬ್ಯಾಂಟಿಂಗ್ ಮಾಡಿದ್ದರೆಂಬುದು ಜನರಾಡುತ್ತಿದ್ದಾರೆ. ಅ ಬಳಿಕ ಕೆಲವೇ ದಿನಗಳಲ್ಲಿ ಉನ್ನತ ಮಟ್ಟದಲ್ಲಿ ರಾಜಿ ಪಂಚಾತಿಗೆ ನಡೆದಿರುವುದು ಕೂಡಾ ಸುದ್ದಿಗೆ ಗ್ರಾಸವಾಗಿತ್ತು.  ಈ ವಿದ್ಯಾಮಾನದ ಬಳಿಕ ಶೆಟ್ಟರ ಹೆಸರಿನಲ್ಲಿ ಕಟ್ಟಿ ಬೆಳೆಸಿದ ಸಂಸ್ಥೆಯೊಂದರೊಳಗೂ ದುರಾಭಿಮಾನ ತಾಂಡವಾಟವಾಡಲು ಪ್ರಯತ್ನಿಸಿದಾಗ ಸ್ವತಃ ಶೆಟ್ಟರೇ ಕಣಕ್ಕಿಳಿದು ಸೂಕ್ತ ಸಮಿತಿಗೆ ಜವಾಬ್ದಾರಿಯುತರಾದ ವ್ಯಕ್ತಿಗಳನ್ನು ನಿರ್ಣಯಿಸುವಲ್ಲಿಗೆ ಸುಖಾಂತ್ಯ ಕಂಡಿತ್ತು ಎನ್ನಲಾಗಿದೆ. ಮೂರು ವರ್ಷಗಳಿಗೊಮ್ಮೆ  ನಡೆಯುವ ಬಂಟರ ಯಾನೆ ನಾಡವರ ಮಾತೃ ಸಂಘದ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಾದಿಯಾಗಿ ಎಲ್ಲೆಡೆ ಅವಿರೋಧ ಆಯ್ಕೆ ನಡೆದಿರುತ್ತದೆ. ಆದರೆ  ಕಾಸರಗೋಡು ಪ್ರತಿನಿಧಿಗಳ ಆಯ್ಕೆಗಾಗಿ ಬಾರಿ ಚುನಾವಣೆ ನಡೆಯುವ ಹಂತದಲ್ಲಿ ಶೆಟ್ಟರ ಬಳಗದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಸ್ಪರ್ಧೆಗಿಳಿದಿದ್ದರು ಮಾತ್ರವಲ್ಲ ಮತಗಳಿಸಲಾಗದೆ ಸೋಲು ಕಂಡಿದ್ದರು.  ಸಂದರ್ಭದಲ್ಲಿ ಬಂಟರ ಸಂಘದ ಸದಸ್ಯತನದ ವಿಚಾರದಲ್ಲಿ ಎಲ್ಲರಿಗೂ ಸದಸ್ಯತನ ನೀಡುವುದಿಲ್ಲ, ಕೆಲವೊಂದು ವ್ಯಕ್ತಿಗಳ ಓಲೈಕೆದಾರರಿಗೆ ಮಾತ್ರ ಸದಸ್ಯತನ ನೀಡಲಾಗುತ್ತದೆ ಎಂದು ಒಂದು ವಿಭಾಗ ಆರೋಪಿಸಿತ್ತು ಎನ್ನಲಾಗಿದೆ.  ಇದು ಕಳೆದು ಕೆಲವೇ ದಿನಗಳೂಳಗೆ ಅದೇ ವ್ಯಕ್ತಿಗಳನ್ನು ಹಾಗೂ ಜಿಲ್ಲಾ, ಪಂಚಾಯತ್ ಬಂಟರ ಸಂಘದ ಅತೃಪ್ತರನ್ನು ಒಂದೆಡೆ ಸೇರಿಸಿಕೊಂಡು ತಳಮಟ್ಟದ ಬಂಟರ ಏಳಿಗೆಗೆಂಬ ನೆಪದಲ್ಲಿ ಹೊಸ ಸಂಘಟನೆಯೊಂದನ್ನು ರಚಿಸ ಹೊರಟಿರುವ ಬಗ್ಗೆ ಇದೀಗ ಚರ್ಚೆಗಳು ತೀವ್ರವಾಗಿದೆ. ಕೆಲವು ಬಂಟ ವಾಟ್ಸಪ್ ಗ್ರೂಪ್ ಗಳಲ್ಲಂತೂ ದಿನ ನಿತ್ಯ ಇದೇ ಚರ್ಚೆಗೆ ವಸ್ತುವಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಇದು ರಾಜಕೀಯ ಪ್ರೇರಿತ ಚರ್ಚೆಯಂತೆ ರಾಜಕೀಯದ ಛಾಯೆ ಅವರಿಸುತ್ತಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. 

ಕಾಸರಗೋಡು ಜಿಲ್ಲೆಗೆ ಇನ್ನೊಂದು ಬಂಟರ ಸಂಘ ಮಾಡುವುದಕ್ಕಿಂತ ಇದ್ದ ಸಂಘವನ್ನೇ ಜೀರ್ಣೋದ್ಧಾರ ಮಾಡುವುದು ಒಳಿತು, ಯಾರಿಗೆ ಅದರ ನೇತೃತ್ವ ವಹಿಸಲಿಕ್ಕಿದೆ ಅವರು ವಹಿಸಲಿ ಆದರೆ ನಮ್ಮಲ್ಲಿ ವಿಭಜನೆ ಬೇಡ ಒಗ್ಗಟ್ಟಿರಲಿ ಎಂದು ಹಿರಿಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಅಧಿಕಾರ ಸ್ಥಾಪನೆ , ಹಣದ ಹುಂ ಕಾರ ಪ್ರದರ್ಶಿಸಲು ,ಕೀರ್ತಿ ಗೋಪುರ ಕಟ್ಟಲು ಬಂಟರಲ್ಲಿ ಅನೈಕ್ಯತೆಯನ್ನುತೋರ್ಪಡಿಸಿ ಅನ್ಯ ಸಮಾಜದಿಂದ ನಗೆಗೀಡಾಗಿಸುವ ರೀತಿಗೆ ಹೋಗಬಾರದು.ಕೆಲವರ ಪ್ರತಿಷ್ಠೆಗೆ ಬಡ ಬಂಟರ ಬಲಿಯಾಗಬಾರದು. ಈಗಾಗಲೇ ಇರುವ ಸಂಘವನ್ನು ಬಲಪಡಿಸುವ. ಬಂಟರ ಭವನ ಇಲ್ಲದಿದ್ದರೂ ತೊಂದರೆಯಿಲ್ಲ .ಅದರ ಹೆಸರಿನಲ್ಲಿ ಬಂಟರು ರಚ್ಚೆ ಪಚ್ಚೆಯಾಗಬಾರದು ಎಂದು ಒಬ್ಬರು ಕಳಕಳಿಯಿಂದ ವಿನಂತಿಸಿದ್ದಾರೆ‌.

ಏನಾದರು ನೆಪ ಹುಡುಕಿ ಬಂಡಾಯವಾಗಿ ಸಿಡಿದೆದ್ದು ಹಣ ಬಲದಿಂದಲೋ ರಾಜಕೀಯದ ಹೆಸರಿನಲ್ಲೋ ಸಮಾಜವನ್ನು ಛಿದ್ರ ಛಿದ್ರ ಮಾಡಿ ನಮಗೆ ಯಾವುದೇ ಯಶಸ್ಸು ಸಾಧಿಸುವುದು ಅಸಾಧ್ಯ .ಅಧಿಕೃತವಾಗಿ ಕಾನೂನಾತ್ಮಕವಾಗಿ ಮುನ್ನಡೆಯುತ್ತಿರುವ ಕಾಸರಗೋಡು ಜಿಲ್ಲಾ ಬಂಟರ ಸಂಘದ ಕಡೆಯಿಂದ ಏನಾದರೂ ತಪ್ಪುಗಳಿದ್ದಲ್ಲಿ ನಾಲ್ಕು ಜನ ಯೋಗ್ಯರು ಕುಳಿತು ಮಾತಾನಾಡಿ ಸಮಸ್ಯೆಗಳನ್ನು ಬಗೆಹರಿಸಿ ಎಂದು ಒಬ್ಬರು ಅಭಿಪ್ರಾಯ ಸೂಚಿಸಿದ್ದಾರೆ. 

ಇಂತಹ ವಿದ್ಯಾಮಾನಗಳನ್ನೆಲ್ಲ ಕಾಣುವಾಗ ಐಕ್ಯತೆಗಾಗಿ ಸಂದೇಶ ಸಾರಿದ ಮಹಾನುಭಾವರ ವಾಕ್ಯಗಳು ಎಲ್ಲಿ ಗಾಳಿ, ನೀರು ಪಾಲಾಯಿತೋ ಎಂಬ ಸಂದೇಹಗಳು ಸಾಮಾನ್ಯ ಜನತೆಗೂ ಅವರಿಸದಿರದು. ಅಧಿಕೃತ ಸಂಘಟನೆಗಳು ಇವುಗಳ ಬಗ್ಗೆ ತುಟಿಪಿಟಿಕ್ಕೆನ್ನದಿರುವುದು ಇದೀಗ ಇನ್ನೊಂದೆಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಮಾಜವೊಂದರ ಒಗ್ಗಟ್ಟು ಪ್ರಭಾವಿ ಜನರ ಸಮಕ್ಷಮದಲ್ಲಿ ಜಗಜ್ಹಾಹೀರಾಗದೆ ಒಟ್ಟಾರೆ ಒಟ್ಟಾಗಿ ಸಮಾಜ ಮುನ್ನಡೆಯಲಿ ಎನ್ನುವುದೆ ಏಕಭಾವದ ಅಭಿಪ್ರಾಯ. ಇನ್ನೆನಾಗುತ್ತದೆಯೋ ಕಾದು ನೋಡಬೇಕಿದೆಯಷ್ಟೆ.. 

Post a Comment

0 Comments