ಪುತ್ತಿಗೆ : ಮಾನದಂಡಗಳನ್ನು ಉಲ್ಲಂಘಿಸಿ ಅನಂತಪುರದಲ್ಲಿ ಕಾರ್ಯಾಚರಿಸುತ್ತಿರುವ ಅನಂತಪುರ ಕೈಗಾರಿಕಾ ವಲಯದಲ್ಲಿರುವ ಕೊಂಬನ್ ಲೂಬ್ಸ್ ಸಂಸ್ಥೆಯನ್ನು ತಕ್ಷಣವೇ ಮುಚ್ಚಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಪುತ್ತಿಗೆ ಗ್ರಾ. ಪಂ. ಸ್ಟಾಪ್ ಮೆಮೋ ನೀಡಿದೆ. ಪಂಚಾಯತಿಗೆ ದೊರೆತ ನಾಗರಿಕ ಹಿತಾಸಕ್ತಿಯ ದೂರಿನ ಮೇರೆಗೆ ಅಧ್ಯಕ್ಷೆ, ಉಪಾಧ್ಯಕ್ಷರು, ವಾರ್ಡು ಪ್ರತಿನಿಧಿ ಸ್ಥಳ ಸಂದರ್ಶಿಸಿ ಪರಿಶೀಲಿಸಿದಾಗ ದೂರಿನಲ್ಲಿ ವಾಸ್ತಾವಾಂಶ ಇರುವುದು ಮನಗಂಡು ಸ್ಟಾಪ್ ಮೆಮೋ ನೋಟೀಸು ಲಗತ್ತಿಸಿ ಮುಚ್ಚುಗಡೆಗೆ ಆದೇಶಿಸಲಾಯಿತು.
ಕೇರಳ ಪಂಚಾಯತ್ ರಾಜ್ ಕಾಯ್ದೆ 233(A3) ಯ ಉಲ್ಲಂಘನೆ ಗಮನಿಸಲಾಗಿದ್ದು, ಇದರಂತೆ. ತಾತ್ಕಾಲಿಕ ಮುಚ್ಚುಗಡೆಗೆ ಆದೇಶಿಸಲಾಗಿದೆ. ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ನೊಟೀಸಿನಲ್ಲಿ ತಿಳಿಸಲಾಗಿದೆ. ಕಳೆದ ಕೆಲವು ಸಮಯಗಳಿಂದ ಅನಂತಪುರ ಪರಿಸರ ಪ್ರದೇಶಗಳನ್ನು ಮಾಲಿನ್ಯದ ದುರ್ಗಂದ ಪಸರಿಸುತ್ತಿದ್ದ ಈ ಕಂಪೆನಿಯ ಕುರಿತು ಸ್ಥಳೀಯ ಗ್ರಾ. ಪಂ. ಪ್ರತಿನಿಧಿ ಮೂಲಕ ನಾಗರಿಕರು ಪಂಚಾಯತಿಗೆ ದೂರು ಸಲ್ಲಿಸಿದ್ದರು.

0 Comments