Ticker

6/recent/ticker-posts

Ad Code

ಮದುವೆ ದಿನ ಬೆಳಿಗ್ಗೆ ವರ ನೇಣು ಬಿಗಿದು ಆತ್ಮಹತ್ಯೆ


ಕಾಸರಗೋಡು: ಮದುಮಗನೋರ್ವ ತನ್ನ ವಿವಾಹ ದಿವಸ ಮುಂಜಾನೆಯೇ ನೇಣುಬಿಗಿದು ಆತ್ಮಹತ್ಯೆ ನಡೆಸಿದ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಮೃತ ಯುವಕ ಮುಡೇರಿ ಪಂಚಾಯತಿನ ಮಾವಿಲಚಾಲ್ ಕೊಲ್ಲನ್ ಚಿರ ರಸ್ತೆಯ ‘ನಾರಾಯಣೀಯಂ” ನಿವಾಸದ ಶಿಬಿನ್ (28) ಎಂದು ಗುರುತಿಸಲಾಗಿದೆ. ಈತ ಜಮ್ಮು ಕಾಶ್ಮೀರದಲ್ಲಿ ಎಸ್ ಎಸ್ ಬಿ ಬೋರ್ಡರ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇಂದು ಈತನ ವಿವಾಹ ನಡೆಯಬೇಕಿತ್ತು. ವಿವಾಹದಂಗವಾಗಿ ಆದಿತ್ಯವಾರ ರಾತ್ರಿ ಮನೆಯಲ್ಲಿ ಸತ್ಕಾರ ಕೂಟ ಏರ್ಪಡಿಸಲಾಗಿತ್ತು.
 ಸತ್ಕಾರ ಕೂಟ ಮುಗಿದು ಜನರೆಲ್ಲರೂ ನಿರ್ಗಮಿಸಿದಾಗ ಶಿಬಿನ್ ಗೆ ಫೋನ್ ಕರೆಯೊಂದು ಬಂದಿದ್ದು ವಧು ಕರೆ ಮಾಡಿರುವುದಾಗಿ ವರನ ಮನೆಯವರು ತಿಳಿಸಿದ್ದಾರೆ. ಫೋನಿನಲ್ಲಿ ಮಾತನಾಡುತ್ತಾ ಬೆಡ್ ರೂಂ ಗೆ ತೆರಳಿದ್ದ ವರ ಬೆಳಿಗ್ಗೆ ಫೋಟೋ ಶೂಟ್ ಗೆಂದು ಛಾಯಾಗ್ರಾಹಕರು ಬಾಗಿಲು ಬಡಿದು ಕರೆದಾಗ ವಾಶ್ ರೂಂ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ನಡೆಸಿದ್ದರು. ಆತ್ಮಹತ್ಯೆಗೆ ಕಾರಣವೆನೆಂದು ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Post a Comment

0 Comments