ತಿರುವನಂತಪುರ: ಕೇರಳದ 13 ನೇ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಸನ್ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು. ಜತೆಗೆ ವಿ.ಡಿ. ಸತೀಸನ್ ಸಂಪುಟದ ಎಲ್ಲಾ 20 ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಿದ್ದರು. ತಿರುವನಂತಪುರಂ ಸೆಂಟ್ರಲ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ರಾಷ್ಡ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ರೇವಂತ್ ರೆಡ್ಡಿ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿ ವಿ.ಡಿ. ಸತೀಶನ್ ಜೊತೆಗೆ, ಪಿ.ಕೆ. ಕುನ್ಹಾಲಿಕುಟ್ಟಿ, ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ. ಮುರಳೀಧರನ್, ಮಾನ್ಸ್ ಜೋಸೆಫ್, ಶಿಬು ಬೇಬಿ ಜಾನ್, ಸಿ.ಪಿ. ಜಾನ್, ಅನೂಪ್ ಜಾಕೋಬ್, ಎ.ಪಿ. ಅನಿಲ್ ಕುಮಾರ್, ಬಿಂದು ಕೃಷ್ಣ, ಪಿ.ಸಿ. ವಿಷ್ಣುನಾಥ್, ಎಂ. ಲಿಜು, ಟಿ. ಸಿದ್ದಿಕ್, ರೋಜಿ ಎಂ. ಜಾನ್, ಒ.ಜೆ. ಜನೀಶ್, ಕೆ.ಎ. ತುಳಸಿ, ಪಿ.ಕೆ. ಬಶೀರ್, ಎನ್. ಶಂಸುದ್ದೀನ್, ಕೆ.ಎಂ. ಶಾಜಿ, ವಿ.ಇ. ಅಬ್ದುಲ್ ಗಫೂರ್ ಪ್ರಮಾಣ ವಚನ ಸ್ವೀಕರಿಸಲಿದ್ದರು. ಕಾಂಗ್ರೆಸ್ ಸಂಪುಟದಲ್ಲಿ 11 ಸಚಿವರಿದ್ದಾರೆ. ಲೀಗ್ 5 ಸಚಿವರನ್ನು ಹೊಂದಿದೆ. ತಿರುವಂಚೂರು ರಾಧಾಕೃಷ್ಣನ್ ಸಭಾಪತಿ ಹಾಗೂ ಶಾನಿಮೋಲ್ ಉಸ್ಮಾನ್ ಉಪ ಸಭಾಪತಿ ಆಗಿರುತ್ತಾರೆ. ತೋಡುಪುಳ ಕ್ಷೇತ್ರದಿಂದ ಆಯ್ಕೆಯಾದ ಅಪು ಜಾನ್ ಜೋಸೆಫ್ ಸರ್ಕಾರಿ ಮುಖ್ಯ ಸಚೇತಕರಾಗಿದ್ದಾರೆ.

0 Comments