Ticker

6/recent/ticker-posts

Ad Code

ಸಪ್ಲೈಕೋದ ಬಕ್ರೀದ್ ಕಿಟ್ ಮೇ 26ರ ವರೆಗೆ ಮಾತ್ರ ವಿತರಣೆ

ಕೊಚ್ಚಿ : ಬಕ್ರಿದ್ ಹಬ್ಬಕ್ಕೆ ಸಂಬಂಧಿಸಿದಂತೆ ಸಪ್ಲೈಕೋ  ಹತ್ತು ವಸ್ತುಗಳನ್ನು ಒಳಗೊಂಡಿರುವ ಬಕ್ರೀದ್ ವಿಶೇಷ ಕಿಟ್ ಅನ್ನು ಸಿದ್ಧಪಡಿಸಿದೆ. ಸಪ್ಲೈಕೋ ಅಂಗಡಿಗಳಲ್ಲಿ ಮೇ 26ರವರೆಗೆ  ಕಿಟ್‌ ಲಭ್ಯವಿರುತ್ತದೆ. 1101 ರೂ. ಮೌಲ್ಯದ ಆಹಾರ ಪದಾರ್ಥಗಳನ್ನು 850 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಕಿಟ್‌ನಲ್ಲಿ ಮೂರು ಕಿಲೋ ಬಿರಿಯಾನಿ ಅಕ್ಕಿ, ಒಂದು ಕಿಲೋ ಸಕ್ಕರೆ, ಒಂದು ಲೀಟರ್ ಶಬರಿ ತೆಂಗಿನ ಎಣ್ಣೆ, ಒಂದು ಕಿಲೋ ಶಬರಿ ಅಪ್ಪ ಪುಡಿ, 250 ಗ್ರಾಂ ಶಬರಿ ಬ್ರಾಂಡ್ ಗೋಲ್ಡ್ ಟೀ ಪುಡಿ, 100 ಗ್ರಾಂ ಮಾಂಸ ಮಸಾಲ, 50 ಗ್ರಾಂ ಗರಂ ಮಸಾಲ, 100 ಗ್ರಾಂ ಚಿಕನ್ ಮಸಾಲ ಮತ್ತು 100 ಗ್ರಾಂ ಕರಿಮೆಣಸಿನ ಪುಡಿ ಇರುತ್ತದೆ. ಕಿಟ್‌ನಲ್ಲಿ ಏಲಕ್ಕಿ ಮತ್ತು ಲವಂಗ ಸೇರಿದಂತೆ 50 ಗ್ರಾಂ ಮಸಾಲೆಗಳು ಸಹ ಸೇರಿವೆ ಎಂದು ಹೇಳಲಾಗಿದೆ.

Post a Comment

0 Comments