Ticker

6/recent/ticker-posts

Ad Code

ಮದ್ಯಪಾನಿಯಾದ ಮಗ ತಂದೆಯ ಶುಗರ್ ಮಾತ್ರೆಗಳನ್ನು ಅತಿಯಾಗಿ ಸೇವಿಸಿ ಸಾವು

 

ಕಾಸರಗೋಡು : ತಂದೆಯ ಶುಗರ್ ಮಾತ್ರೆಗಳನ್ನು ಅತಿಯಾಗಿ ಸೇವಿಸಿದ ಮದ್ಯಪಾನಿಯಾದ  ಮಗ ಸಾವನ್ನಪ್ಪಿದ ಪ್ರಕರಣ ವೆಳ್ಳರಿಕುಂಡು ಪೊಲೀಸ್ ಠಾಣೆ ವ್ಯಾಪ್ತಿಯ ಕಂಜಿರುತುಂಗಲ್‌ನ ಪುಂಗಮ್‌ಚಲ್‌ನ ವೆಸ್ಟ್ ಏಳೇರಿಯಲ್ಲಿ ನಡೆದಿದೆ. ಇಲ್ಲಿನ ರಾಜು ಕುರಿಯನ್ ಅವರ ಮಗ ಜಿನ್ಸ್ ರಾಜ್ (28) ಮೃತಪಟ್ಟ ವ್ಯಕ್ತಿ. ಮೇ 18 ರಂದು ಅವರ ಮನೆಯೊಳಗೆ ಜಿನ್ಸ್ ರಾಜ್ ಕುಸಿದು ಬಿದ್ದಿದ್ದು ಮಾಹಿತಿ ಪಡೆದು ಆಗಮಿಸಿದ ಸಂಬಂಧಿಕರು ಅವರನ್ನು ವೆಳ್ಳರಿಕುಂಡುವಿನ ಆಸ್ಪತ್ರೆಗೆ ಕರೆದೊಯ್ದರು. ಅವರ ಸ್ಥಿತಿ ಗಂಭೀರವಾಗಿದ್ದರಿಂದ, ಅವರನ್ನು ತಕ್ಷಣ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅವರು ಅಧಿಕ ಪ್ರಮಾಣದ ಔಷಧಿಯನ್ನು ಸೇವಿಸಿರುವುದು ತಿಳಿದುಬಂದಿದೆ. 

ಸಂಬಂಧಿಕರು ಮನೆಗೆ ಹೋಗಿ ಪರಿಶೀಲಿಸಿದಾಗ, ಅಲ್ಲಿ ಖಾಲಿಯಾದ ಶುಗರ್  ಮಾತ್ರೆ ಕವರ್ ಗಳು ಕಂಡುಬಂದಿದ್ದವು. ಜಿನ್ಸ್ ಒಬ್ಬ ಮದ್ಯವ್ಯಸನಿ ಎಂದು ಅವರ ತಂದೆ ರಾಜು ಕುರಿಯನ್ ವೆಲ್ಲರಿಕುಂಡು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.  ವೆಲ್ಲರಿಕುಂಡು ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments