ಬದಿಯಡ್ಕ : ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಿದ ಯು.ಡಿ.ಎಫ್.ನ ವಿ.ಡಿ. ಸತೀಶನ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ಅಂಗನವಾಡಿ ಕಾರ್ಯಕರ್ತೆಯರು ಬದಿಯಡ್ಕದಲ್ಲಿ ವಿಜಯೋತ್ಸವ ನಡೆಸಿದರು. ಬದಿಯಡ್ಕ ಪಂಚಾಯತ್ ಕಛೇರಿ ಸಮೀಪದಿಂದ ಆರಂಭವಾದ ಮೆರವಣಿಗೆಯು ಪೇಟೆ ಸುತ್ತಿ ಮೇಲಿನ ಪೇಟಿಯಲ್ಲಿ ಮುಕ್ತಾಯಗೊಂಡಿತು.
ಬದಿಯಡ್ಕ ಪಂಚಾಯತ್ ಸದಸ್ಯ ಹಾಗೂ ಮಂಡಲ ಕಾಂಗ್ರೆಸ್ ಅಧ್ಯಕ್ಷರಾದ ಶ್ಯಾಂ ಪುಸಾದ್ ಮಾನ್ಯ. ಯ.ಡಿ. ಎಫ್ ಪಂಚಾಯತ್ ಅಧ್ಯಕ್ಷ ಅನ್ವರ್ ಓಸೋನ್, ಕಾರ್ಯದರ್ಶಿ ನಾರಾಯಣ ಯಂ. ನೀರ್ಚಾಲು, ಯು.ಡಿ.ಎಫ್. ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಮೀದ್ ಕೆಡಂಜಿ. ಪಂಚಾಯತ್ ಸದಸ್ಯೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಅಶ್ವತಿ, ಕಾರ್ಯಕರ್ತೆಯರಾದ ಹೈಮಾವತಿ, ವನಜಾಕ್ಷಿ, ಲೀಲಾವತಿ ಪಟ್ಟಾಜೆ. ಲೀಲಾ ಪಟ್ಟಾಜೆ. ಶ್ರೀಜ ಬಾರಡ್ಕ ಮೊದಲಾದವರು ಭಾಗವಹಿಸಿದರು.

0 Comments