ಕುಂಬಳೆ: ಕಾಸರಗೋಡು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮೃತರನ್ನು ಉಡುಪಿಯ ಅಬ್ದುಲ್ ರಹೀಮ್ ಅವರ ಪುತ್ರ ಮೊಹಮ್ಮದ್ ರಹೀಲ್ (34) ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಬಾಪಾಯಿತೋಟ್ಟಿಯ ಉಪ್ಪಳ ನಿವಾಸಿ ಅಬ್ದುಲ್ ಜಾಸಿರ್ ಮತ್ತು ಕುರ್ಚಿಪ್ಪಳ್ಳದ ಮೊಹಮ್ಮದ್ ರಾಯಿಸ್ ಎಂದು ಗುರುತಿಸಲಾಗಿದೆ.

0 Comments