Ticker

6/recent/ticker-posts

Ad Code

ಪೆರ್ಲ ಶಾಲಾ ನಾಯಕಿ ಸಮನ್ವಿ‌ ಬಜಕೂಡ್ಲು ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ಗರಿಷ್ಠ ಸಾಧನೆ

 


ಪೆರ್ಲ : ಪೆರ್ಲ ಶ್ರೀಸತ್ಯನಾರಾಯಣ ಎಎಲ್ ಪಿ ಶಾಲೆಯ ಸಮನ್ವಿ‌ ಬಜಕೂಡ್ಲು  2025-26ನೇ ಸಾಲಿನ ಎಲ್ ಎಸ್ ಎಸ್ ಸ್ಕಾಲರ್ ಶಿಪ್ ‌ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳೊಂದಿಗೆ ಉತ್ತೀರ್ಣರಾಗುವುದರೊಂದಿಗೆ ಸಾಧನೆ ತೋರಿದ್ದಾಳೆ. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ರಾಜೇಶ್ ಬಜಕೂಡ್ಲು - ಸುನೀತಾ ದಂಪತಿಗಳ ಪುತ್ರಿಯಾದ ಸಮನ್ವಿ 4ನೇ ತರಗತಿ ವಿದ್ಯಾರ್ಥಿನಿ.ಪಠ್ಯ ಚಟುವಟಿಕೆಗಳಲ್ಲದೆ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ನಟನೆ ಹಾಗೂ ಕ್ರೀಡಾ ರಂಗದಲ್ಲೂ ಶಾಲೆ ಮತ್ತು ಉಪಜಿಲ್ಲಾ ಮಟ್ಟದಲ್ಲೂ ಸಾಧನೆ ಮೆರೆದಿದ್ದಳು. ರಂಗಡಿಂಡಿಮ ಪೆರ್ಲ ಇದರ ಕಲಾವಿದೆಯಾಗಿರುವ ಈಕೆ ಹಲವಾರು ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದಳು. ಈಕೆಯ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ.

Post a Comment

0 Comments