Ticker

6/recent/ticker-posts

Ad Code

ಇಡಿ ಅಧಿಕಾರಿಗಳ ವಿರುದ್ಧ ಹಿಂಸಾಚಾರ; ನಾಲ್ವರು ಎಸ್‌ಎಫ್‌ಐ-ಡಿವೈಎಫ್‌ಐ ಕಾರ್ಯಕರ್ತರ ಬಂಧನ : ಕೊಲೆ ಯತ್ನ ಕೇಸು



ತಿರುವನಂತಪುರ : ಇಡಿ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣದಲ್ಲಿ ನಾಲ್ವರು ಎಸ್‌ಎಫ್‌ಐ-ಒರ್ವ ಡಿವೈಎಫ್‌ಐ ಕಾರ್ಯಕರ್ತನ ಬಂಧನವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ  ಹನ್ನೆರಡು ಜನರಲ್ಲಿ ನಾಲ್ವರು ಒಪ್ಪಂದದಂತೆ ಶರಣಾಗಿದ್ದಾರೆ.ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ ಆರೋಪಿಗಳ ವಿರುದ್ಧ ಜಾಮೀನು ರಹಿತ ಆರೋಪವನ್ನು ದಾಖಲಿಸಲಾಗಿದೆ. ಪಾಳಯಂ ಏರಿಯಾ ಸಮಿತಿ ಕಚೇರಿಗೆ ನುಗ್ಗಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರ ಕ್ರಮದ ವಿರುದ್ಧ ಸಿಪಿಎಂ ಪ್ರತಿಭಟನೆ ಮತ್ತೆ ಉದ್ವಿಗ್ನತೆಗೆ ಕಾರಣವಾಯಿತು.

 ಆರೋಪಿಗಳನ್ನು ಯಾವುದೇ ರೀತಿಯಲ್ಲಿ ಬಂಧಿಸುವ ಗುರಿ ಹೊಂದಲಾಗಿದೆ ಎಂದು ಎಡಿಜಿಪಿ ಎಚ್.ವೆಂಕಟೇಶ್ ತಿಳಿಸಿದ್ದಾರೆ.  

 ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಇಡಿ ಸಹಾಯಕ ನಿರ್ದೇಶಕ ಸನತ್ ರೆಡ್ಡಿ ಹೇಳಿಕೆ.

‘ಕೊಂದು ಬಿಡು’ ಎಂದು ಕೂಗುತ್ತ ದಾಳಿ ನಡೆಸಲಾಗಿದೆ. ಇಡಿ ಅಧಿಕಾರಿ ಡಿಕ್ಸನ್ ಡೇವಿಡ್ ಮತ್ತು ಚಾಲಕ ಶ್ಯಾಮ್ ಕೂಡ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಡಿವೈಎಫ್‌ಐ ಮುಖಂಡರು ಸೇರಿ ಐವರನ್ನು ಬಂಧಿಸಲಾಗಿದೆ. 15 ಮಂದಿಯನ್ನು ಗುರುತಿಸಲಾಗಿದೆ ಎಂದು ಮ್ಯೂಸಿಯಂ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು, ನೇತಾರರು ಸುಮ್ಮನೆ ನಿಂತಿದ್ದರಿಂದ ದಾಳಿಯಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ಐದು ನಿಮಿಷಕ್ಕೂ ಹೆಚ್ಚು ಕಾಲ ಹರಸಾಹಸ ಪಡಬೇಕಾಗಿ ಬಂದಿತ್ತು ಎಂದು ಹೇಳಲಾಗಿದೆ.

Post a Comment

0 Comments