Ticker

6/recent/ticker-posts

ಹ್ಯಾಶಿಷ್ ಎಣ್ಣೆ ಸಹಿತ ಬದಿಯಡ್ಕ ವಿದ್ಯಾಗಿರಿ ನಿವಾಸಿ ಕಾಞಂಗಾಡ್ ಬಳಿ ಸೆರೆ


 ಕಾಞಂಗಾಡ್:  3 ಗ್ರಾಂ ಹಾಶಿಷ್ ಎಣ್ಣೆ ಸಹಿತ ಬದಿಯಡ್ಕ, ವಿದ್ಯಾಗಿರಿ ನಿವಾಸಿಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ವಿದ್ಯಾಗಿರಿ ನಿವಾಸಿ ಎಂ.ಹಕ್ಕೀಂ(28) ಬಂಧಿತ ಆರೋಪಿ. ಹೊಸದುರ್ಗ ಎಸ್.ಯು.ಟಿ.ಅಖಿಲ್ ಹಾಗುಜ ತಂಡ ಆರೋಪಿಯನ್ನು ಬಂಧಿಸಿದೆ. ನಿನ್ನೆ (ಆದಿತ್ಯವಾರ) ಬೆಳಗ್ಗೆ 10.30 ಕ್ಕೆ ಕಾಞಂಗಾಡ್ ರೈಲು ನಿಲ್ದಾಣ ಬಳಿಯ ಪಾರ್ಕಿಂಗ್ ಮೈದಾನದಿಂದ. ಆರೋಪಿಯನ್ನು ಬಂಧಿಸಲಾಗಿದೆ. ಶಂಕಿತ ರೀತಿಯಲ್ಲಿ ಹಕ್ಕೀಂ ಕಂಡುಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಿ ಅನಂತರ ಜಾಮೀನು ಮೂಲಕ ಬಿಡುಗಡೆಗೊಳಿಸಲಾಯಿತು.

Post a Comment

0 Comments