ಕಾಸರಗೋಡು: ಸ್ಕೂಟರಿನಲ್ಲಿ ಸಾಗಿಸುತ್ತಿದ್ದ 34.56 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯವನ್ನು ಕಾಸರಗೋಡು ಎಕ್ಸೈಸದ ಎನ್ ಫೋರ್ಸ್ ಮೆಂಟ್, ಆಂಟಿ ನಾರ್ಕೊಟಿಕ್ ವಿಶೇಷ ತಂಡದ ಇನ್ಸ್ಪೆಕ್ಟರ್ ಶ್ರೀನಿವಾಸನ್ ಪತ್ತಿಲ್ ಹಾಗೂ ತಂಡ ವಶಪಡಿಸಿದೆ. ಇದಕ್ಕೆ ಸಂಬಂದಪಟ್ಟಂತೆ ಮದ್ಯ ಸಾಗಿಸಿದ ಬೆದಿರಡ್ಕ ಕಿನ್ನಿಗೋಳಿ ನಿವಾಸಿ ಸುರೇಶ್.ಬಿ.ಪಿ ಎಂಬಾತನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಹಲವು ಅಬಕಾರಿ ಸಾಗಾಟ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್, ಇತರರಾದ ನೌಷಾದ್.ಕೆ, ಪ್ರಜಿತ್ ಕೆ.ಆರ್, ರಾಜೇಶ್.ಪಿ,ಅಥುಲ್ ಟಿ.ಪಿ.ಮೊದಲಾದವರು ಕಾರ್ಯಾಲಯದಲ್ಲಿ ಭಾಗವಹಿಸಿದರು
0 Comments