Ticker

6/recent/ticker-posts

ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ಮುಖಂಡ ವಿ.ಎಸ್.ಅಚ್ಚುತಾನಂದನ್. ನಿಧನ


 ತಿರುವನಂತಪುರಂ: ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್‌ ನೇತಾರ ವಿ.ಎಸ್.ಅಚ್ಚುತಾನಂದನ್ (102) ನಿಧನರಾಗಿದ್ದಾರೆ. ತಿರುವನಂತಪುರಂ ಎಸ್.ಯು.ಟಿ.ಆಸ್ಪತ್ರೆಯಲ್ಲಿ ಅವರು ಇಂದು (ಸೋಮವಾರ) ಸಾಯಂಕಾಲ 3.20 ರ ವೇಳೆ ಕೊನೆಯುಸಿರೆಳೆದರು.

1923 ಅಕ್ಟೋಬರ್ 20 ರಂದು ಆಲಪುಯ ಜಿಲ್ಲೆಯ ಪುನ್ನಪ್ರದಲ್ಲಿ ಜನಿಸಿದ ಅವರು 2006-11 ವರ್ಷದ 12 ನೇ ವಿಧಾನಸಭೆಯಲ್ಲಿ  21 ನೇ ಮುಖ್ಯಮಂತ್ರಿಯಾದರು.1986 ರಿಂದ 2009 ರ ವರೆಗೆ ಸಿಪಿಎಂ ಪೊಲೀಟ್ ಬ್ಯೂರೋ ಸದಸ್ಯರಾಗಿದ್ದರು. 1964 ರಿಂದ 2015 ರ ವರೆಗೆ ಪಕ್ಷದ ಕೇಂದ್ರ ಸಮಿತಿ ಸದಸ್ಯರಾಗಿದ್ದರು.
   ವಿ.ಎಸ್.ಅವರ ಮೃತದೇಹ ಇಂದು ಅವರ ತಿರುವನಂತಪುರಂ ವಸತಿಗೆ ಕೊಂಡೊಯ್ಯಲಾಗುವುದು. ನಾಳೆ ದರ್ಬಾರ್ ಹಾಲ್ ನಲ್ಲಿ ಅಂತಿಮ ದರ್ಶನ ನಡೆಯಲಿದೆ. ಬುದವಾರದಂದು ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆಯಿದೆ.

Post a Comment

0 Comments