Ticker

6/recent/ticker-posts

ಮಸೀದಿಯ ಕಂಪೌಂಡ್ ಬಳಿ‌ ನಿಲ್ಲಿಸಿದ್ದ ಕಾರು ನಿಗೂಡ ರೀತಿಯಲ್ಲಿ ಬೆಂಕಿಗಾಹುತಿ; ಪೊಲೀಸ್ ತನಿಖೆ ಆರಂಭ


 ಬದಿಯಡ್ಕ: ನೆಲ್ಲಿಕಟ್ಟೆ ಬಳಿಯ ಪೈಕದಲ್ಲಿ ಮಸೀದಿಯ ಕಂಪೌಂಡ್ ಬಳಿ ನಿಲ್ಲಿಸಿದ್ದ ಕಾರು ನಿಗೂಡ ರೀತಿಯಲ್ಲಿ ಬೆಂಕಿಗಾಹುತಿಯಾಗಿದೆ. ಪೈಕ ಜುಮಾ ಮಸೀದಿಯ ಉಸ್ತಾದ್ ರಾಸ ಬಾಫಖಿ ಹೈತಮಿ ಎಂಬವರ ಕಾರು ಇದಾಗಿದೆ.
ಕಾರಿನೊಳಗೆ ಇರಿಸಿದ್ದ ಪಾಸ್‌ಪೋರ್ಟ್, ಇತರ ದಾಖಲಿಗಳು ಕೂಡಾ ಹೊತ್ತಿ ಉರಿದಿವೆ. ಇಂದು (ಗುರುವಾರ) ಮುಂಜಾನೆ 2.30 ರ ವೇಳೆ ಘಟನೆ ನಡೆದಿದೆ. ಕಾರು ಹೊತ್ತಿ ಉರಿಯುವುದು ಕಂಡ ಸ್ಥಳೀಯರು ಅಗ್ನಿಶಾಮಕ ದಳ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ಅಧಿಕಾರಿಗಳು ಬಹಳ ಹೊತ್ತಿನ ಪ್ರಯತ್ನದ ನಂತದ ಬೆಂಕಿ ನಂದಿಸಿದರು. ಕಾರಿನ ಪಕ್ಕದಲ್ಲೇ ಇದ್ದ ಶಾಲಾ ಬಸ್ಸು, ಸ್ಕೂಟರು ಎಂಬಿವುಗಳಿಗೂ ಹಾನಿಯಾಗಿವೆ. ಕಾರು ಬೆಂಕಿಗಾಹುತಿ ಹಿಂದೆ ನಿಗೂಡತೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ

Post a Comment

0 Comments