Ticker

6/recent/ticker-posts

ಯುವ ಗಾಯಕ ವೇಡನ್ ವಿರುದ್ದ ಅತ್ಯಾಚಾರ ಆರೋಪ; ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ಯುವ ಡಾಕ್ಟರ್ ದೂರು


 ಎರ್ನಾಕುಲಂ: ರಾಪಿಂಗ್ ತಾರೆ ಹಿರಣ್ ದಾಸ್ ಮುರಳಿ‌ ಯಾನೆ ವೇಡನ್ ವಿರುದ್ದ ಅತ್ಯಾಚಾರ ಆರೋಪ ಉಂಟಾಗಿದೆ. ಮದುವೆಯಾಗುವುದಾಗಿ ನಂಬಿಸಿ ವೇಡನ್ ತನ್ನನ್ನು ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆಂದು ಯುವ ಮಹಿಳೆ ಡಾಕ್ಟರ್ ಒಬ್ಬರು ದೂರಿದ್ದಾರೆ. ಈ ಬಗ್ಗೆ ತೃಕ್ಕಾಕರ ಪೊಲೀಸರಿಗೆ ದೂರು ನೀಡಲಾಗಿದ್ದು ಪೋಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

  2021 ರಿಂದ 23 ರ ವರೆಗೆ ಹಲವು ಸಲ ಅತ್ಯಾಚಾರ ನಡೆದಿರುವುದಾಗಿ ದೂರಲಾಗಿದೆ. ಕೋಜಿಕ್ಕೋಡ್, ಕೊಚ್ಚಿನ್ ಸಹಿತ ಹಲವೆಡೆಗಳಲ್ಲಿ ಅತ್ಯಾಚಾರ ನಡೆಸಲಾಗಿದೆ. ಅಲ್ಲದೆ ತನ್ನ ಬಳಿಯೊಂದ ಹಣ ಸಹ ಪಡೆದಿರುವುದಾಗಿ ಯುವ ಡಾಕ್ಟರ್ ದಾಖಲೆ ಸಮೇತ ದೂರು ನೀಡಿದ್ದಾರೆ.

   ಕಳೆದ ಎಪ್ರಿಲ್ ತಿಂಗಳಲ್ಲಿ ಗಾಂಜ ಸಹಿತ ವೇಡನ್ ಹಾಗೂ ಸಂಗಡಿಗರನ್ನು ಬಂಧಿಸಲಾಗಿತ್ತು. ಆದರೆ ಅನಂತರ ಈ ಪ್ರಕರಣದಿಂದ ವೇಡನ್ ಮುಕ್ತರಾಗಿದ್ದರು.ರಾಜ್ಯದಲ್ಲಿ ಸಿಪಿಎಂ ಪಕ್ಷವು ವೇಡನ್ ಪರ ನಿಂತಿತ್ತು. ಈತನ ಜೀವನವನ್ನು ‌ಪಠ್ಯ ಪುಸ್ತಕವಾಗಿಸಲು ಯತ್ನ ನಡೆದಿತ್ತು. ಆದರೆ ರಾಜ್ಯಪಾಲರು ಅದನ್ನು ತಡೆಹಿಡಿದಿದ್ದರು.

Post a Comment

0 Comments