Ticker

6/recent/ticker-posts

ಮುಳಿಯಾರು ಆಲನಡ್ಕದ ಜನರಲ್ಲಿ ಭೀತಿ ಹುಟ್ಟಿಸಿದ್ದ ಕಾಡು ಹಂದಿಯ ಗುಂಡಿಟ್ಟು ಕೊಲೆ


 ಮುಳಿಯಾರು: ಇಲ್ಲಿನ ಆಲನಡ್ಕದ ಜನರಲ್ಲಿ ಭೀತಿ ಹುಟ್ಟಿಸಿದ್ದ ಕಾಡು ಹಾದಿಯನ್ನು ಜಿಲ್ಲಾ ಅರಣ್ಯ ಅಧಿಕಾರಿ ಕೆ.ಅಶ್ರಫ್, ಸಹಾಯಕ ಅಧಿಕಾರಿ ಎನ್.ವಿ.ಸತ್ಯನ್ ನೇತೃತ್ವದಲ್ಲಿ ಗುಂಡಿಟ್ಟು ಕೊಲ್ಲಲಾಯಿತು. ಇಂದು (ಗುರುವಾರ) ಮುಂಜಾನೆ ಶಾರ್ಪ್ ಶೂಟರ್ ಅಬ್ದುಲ್ ಗಫೂರ್ ಅವರು ಆಲನಡ್ಕ ಮದ್ರಸ ಪರಿಸರದಿಂದ ಕಾಡು ಹಂದಿಯನ್ನು ಗುಂಡಿಟ್ಟು ಕೊಂದರು. ಶಾಲೆ, ಮದ್ರಸ ಮಕ್ಕಳಿಗೆ, ಕೃಷಿಕರಿಗೆ, ಸಾರ್ವಜನಿಕರಿಗೆ ತಲೆ ನೋವಾಗಿ ಪರಿಣಮಿಸಿದ್ದ ಕಾಡು ಹಂದಿಯನ್ನು ಕೊಲ್ಲುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಹಂದಿಯ ಕಳೇಬರವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ

Post a Comment

0 Comments