ತಿರುವನಂತಪುರಂ: ರಾಜ್ಯದಲ್ಲಿ ಶಾಲೆಗಳಿಗೆ ನೀಡುವ ಬೇಸಿಗೆ ಕಾಲದ ರಜೆ ಮುಂದೂಡಲಾಗುತ್ತಿದೆಯೇ? ಎಪ್ರಿಲ್, ಮೇ ತಿಂಗಳ ಬೇಸಿಗೆ ಕಾಲದ ರಜಾದ ಬದಲು ಜೂನ್, ಜುಲೈ ತಿಂಗಳಲ್ಲಿ ನೀಡಬಹುದೇ? ಸ್ವತಃ ರಾಜ್ಯ ಶಿಕ್ಷಣ ಸಚಿವ ಪಿ.ಶಿವನ್ ಕುಟ್ಟಿ ಅವರೇ ಫೇಸ್ಬುಕ್ ಮೂಲಕ ಹೀಗೊಂದು ಮಾಹಿತಿಯನ್ನು ತೇಲಿ ಬಿಟ್ಟಿದ್ದು ವ್ಯಾಪಕ ಚರ್ಚೆ ಆರಂಭವಾಗಿದೆ. ಫೇಸ್‌ಬುಕ್ ಪೋಸ್ಟ್ ಕೆಳಗೆ ಕಮೆಂಟ್ ಹಾಕಿದವರಲ್ಲಿ ಬಹುತೇಕ ಮಂದಿ ಈ ನಿರ್ದಾರ ಸ್ವಾಗತಾರ್ಹ ಎಂದಿದ್ದಾರೆ.
ಇದೀಗ ರಾಜ್ಯದಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗುತ್ತದೆ. ಬೇಸಿಗೆ ಕಾಲದ ತೀವ್ರ ಉಷ್ಣತೆಯ ಕಾಲವಿದು. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಇದೇ ತಿಂಗಳು ರಜೆಯಾಗಿರುತ್ತದೆ.
ಜೂನ್, ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆ ತೀವ್ರವಾಗುತ್ತದೆ. ಈ ಸಮಯದಲ್ಲಿ ಕೆಲವೊಮ್ಮೆ ರಜೆಯೂ ಆಗಿರುತ್ತದೆ. ಅಲ್ಲದೆ ತೀವ್ರ ಮಳೆಯಿಂದಾಗಿ ಪುಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಹಿಂಜರಿಯುತ್ತಾರೆ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ರಜೆ ಕೊಟ್ಟರೆ ಉತ್ತಮ ಎಂಬ ಅಭಿಪ್ರಾಯವೂ ಇದೆ. ಬೇಸಿಗೆ ರಜೆ ಇನ್ನು ನೆನಪು ಮಾತ್ರವಾಗಲಿದೆಯೇ ಎಂಬ ಚರ್ಚೆ ವ್ಯಾಪಕವಾಗಿದೆ.
0 Comments