Ticker

6/recent/ticker-posts

ಜ್ವರ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಆಸ್ಪತ್ರೆಯಲ್ಲಿ ಮೃತ್ಯು


 ಕಾಸರಗೋಡು: ಜ್ವರ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡು, ಪೆರುಂಬಳ ಪಾಲಿಚ್ಚಿಯಡ್ಕದ ಸುಕುಮಾರನ್- ಲತ ದಂಪತಿಯ ಪುತ್ರಿ ಆರತಿ(24) ಮೃತಪಟ್ಟ ಯುವತಿ. ಇಂದು (ಬುದವಾರ) ಬೆಳಗ್ಗೆ ಕಾಸರಗೋಡು ನುಳ್ಳಿಪ್ಪಾಡಿ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಆಕೆ ಕೊನೆಯುಸಿರೆಳೆದರು. ಜ್ವರ ಪೀಡಿತಳಾಗಿ ಆಸ್ಪತ್ರೆಯಲ್ಲಿ ದಾಖಲಾದ ಆರತಿಗೆ ಹೃದಯಾಘಾತ ಉಂಟಾಯಿತೆಂದು ಸಂಬಂಧಿಕರು ತಿಳಿಸಿದ್ದಾರೆ.‌ಮೃತಳು ತಂದೆ, ತಾಯಿ, ಸಹೋದರಿಯದಾದ ಆತಿರ, ಸುಕನ್ಯ ಎಂಬಿವರನ್ನು ಅಗಲಿದ್ದಾರೆ.

Post a Comment

0 Comments