Ticker

6/recent/ticker-posts

ಭಾರೀ ಮಳೆ, ಗಾಳಿಗೆ ಮನೆಯ ಮಾಡು ಕುಸಿದು ಅಪಾರ ನಾಶ ನಷ್ಟ; ಮನೆ ಮಂದಿ ಗಾಯಗಳಿಲ್ಲದೆ ಪಾರು


 ಬದಿಯಡ್ಕ:  ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಮನೆಯ ಮಾಡು ಕುಸಿದು ಬಿದ್ದ ಘಟನೆ ನಡೆದಿದೆ. ಈ ವೇಳೆ ಮನೆಯಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಪಾರಾದರು. 



ನಿನ್ನೆ (ಬುದವಾರ) ರಾತ್ರಿ ಬದಿಯಡ್ಕ ಪಂಚಾಯತು ವ್ಯಾಪ್ತಿಯ ಗೋಳಿಯಡ್ಕದಲ್ಲಿ ಈ ಘಟನೆ ನಡೆದಿದೆ. 



ಗೋಳಿಯಡ್ಕ ಪರಿಶಿಷ್ಟ ಜಾತಿ ಉನ್ನತಿಯ ನಲಿಕ್ಕೆದಾಯ ವಿಭಾಗದ  ದಿವಂಗತ ಬಾಲಕೃಷ್ಣನ್ ಅವರ ಪತ್ನಿ ಲಕ್ಷ್ಮಿ ಎಂಬವರ ಮನೆಯ ಮೇಲ್ಭಾಗ ಕುಸಿದಿದೆ. ಮಾಡು ಮುರಿಯುತ್ತಿರುವ ಶಬ್ದ ಕೇಳಿ ಮನೆ ಮಂದಿ ಓಡಿ ಹೊರಗೆ ಬಂದ ಹಿನ್ನೆಲೆಯಲ್ಲಿ ಯಾವುದೇ ಗಾಯಗಳಿಲ್ಲದೆ ಪಾರಾದರು. ಮಾಡು ಕುಸಿತದ ಹಿನ್ನೆಲೆಯಲ್ಲಿ ಅಪಾರ ನಾಶ ನಷ್ಟ ಉಂಟಾಗಿದೆ.

Post a Comment

0 Comments