Ticker

6/recent/ticker-posts

ಮಿನಿ ಟಿಪ್ಪರ್- ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದು ಓರ್ವ‌ ಮೃತ್ಯು; ಮಹಿಳೆ, ಮಗುವಿಗೆ ಗಂಭೀರ ಗಾಯ


 ವಿಟ್ಲ: ಮಿನಿ ಟಿಪ್ಪರ್- ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ನಡೆದಿದೆ. ಕಾರು ಚಾಲಕ ಅನಂತಾಡಿ ನಿವಾಸಿ ಅನೀಶ್ (34) ಮೃತಪಟ್ಟವರಾಗಿದ್ದಾರೆ. ಕಾರಿನಲ್ಲಿದ್ದ ಅನೀಶರ ಸಹೋದರಿ, ಮಗು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು  ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ. ವೀರಕಂಬ ಗ್ರಾಮದ ಕೆಲಿಂಜದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಕಲ್ಲಡ್ಕದಿಂದ ವಿಟ್ಲ ಭಾಗಕ್ಕೆ ಬರುತ್ತಿದ್ದ ಕಾರಿಗೆ ಎದುರು ಭಾಗದಿಂದ ಬರುತ್ತಿದ್ದ ಮಿನಿ ಟಿಪ್ಪರ್ ಡಿಕ್ಕಿ ಹೊಡೆದಿತ್ತು. ಗಾಯಗೊಂಡಿದ್ದ ಅನೀಶ್, ಸಹೋದರಿ, ಹಾಗೂ ಮಗುವನ್ನು ಸ್ಥಳೀಯರು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅನೀಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Post a Comment

0 Comments