Ticker

6/recent/ticker-posts

ಆ.17ಕ್ಕೆ ಕುಂಬ್ಡಾಜೆ ಬಂಟರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಯಕ್ಷ ಗಾನ- ವೈಭವಕ್ಕೆ ನಿರ್ಧಾರ


ಬದಿಯಡ್ಕ : ಕುಂಬಡಾಜೆ ಬಂಟರ ಸಂಘದ ಪದಾಧಿಕಾರಿಗಳ ಸಭೆ   ಸಮಿತಿ ಅಧ್ಯಕ್ಷರಾದ ಸಂತೋಷ್ ಕುಮಾರ ರೈ ಗಾಡಿಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.  ಸಭೆಯಲ್ಲಿ ಅಗೋಸ್ಟ್ 10 ರಂದು ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರ ನೇತೃತ್ವದಲ್ಲಿ ಜರಗುವ ಕೆಸರುಗದ್ದೆ ಕಾರ್ಯಕ್ರಮದ ಯಶಸ್ಸಿಗೆ  ತಂಡಗಳನ್ನು ಕಳುಹಿಸುವುದು ಸೇರಿದಂತೆ , ಹೆಚ್ಚು ಮಂದಿ ಪಾಲ್ಗೊಳ್ಳುವುದಕ್ಕೆ ಬೇಕಾದ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.  

ಅದೇ ರೀತಿ ಅಗೋಸ್ಟ್ 17 ರಂದು ಕುಂಬಡಾಜೆ ಬಂಟರ ಸಮಾವೇಶ , ಪ್ರತಿಭಾ ಪುರಸ್ಕಾರ ಹಾಗೂ ಬಂಟ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ ಗಾನ- ವೈಭವ ಪೊಡಿಪ್ಪಳ್ಳ ಸಭಾಭವನದಲ್ಲಿ ನಡೆಸಲು ತೀರ್ಮಾನಿಸಲಾಯಿತು.  

ಸಭೆಯಲ್ಲಿ ಉಪಾಧ್ಯಕ್ಷರಾದ ಹರ್ಷಕುಮಾರ್ ರೈ , ಜಿಲ್ಲಾ ಸಮಿತಿ ಸದಸ್ಯರಾದ ಸುಧೀರ್ ಕುಮಾರ್ ರೈ,ಶ್ರೀಮತಿ ಸುನಿತಾ ರೈ , ಫಿರ್ಕಾ ಕಾರ್ಯದರ್ಶಿ ಸುರೇಶ್ ಶೆಟ್ಟಿ , ಸದಸ್ಯರಾದ  ಅನಂತ ರೈ, ಪಂಚಾಯತು ಸಮಿತಿ ಸದಸ್ಯರಾದ ಬಾಬು ರೈ ಕೊಳಂಬೆ, ಜಯಪ್ರಕಾಶ್ ಶೆಟ್ಟಿ, ಕೃಷ್ಣ ಭಂಡಾರಿ ಉಪಸ್ಥಿತರಿದ್ದರು.  

ಸಮಿತಿ ಕಾರ್ಯದರ್ಶಿ ಅಮೃತ್ ರಾಜ್ ರೈ ಸ್ವಾಗತಿಸಿ , ಕೋಶಾಧಿಕಾರಿ ಸೀತಾರಾಮ ರೈ ವಂದಿಸಿದರು

Post a Comment

0 Comments