Ticker

6/recent/ticker-posts

ಗೆಳೆಯರ ಬಳಗಕ್ಕೆ ಸಂದೇಶ ನೀಡಿದ ನಂತರ ವಾಟ್ಸಾಪ್ ಸ್ಟೇಟಸ್ ಹಾಕಿದ ಯುವ ಡಾಕ್ಟರ್ ಆತ್ಮಹತ್ಯೆ


 ಗೆಳೆಯರ ಬಳಗಕ್ಕೆ ಸಂದೇಶ ನೀಡಿದ ನಂತರ ವಾಟ್ಸಾಪ್ ಸ್ಟೇಟಸ್ ಹಾಕಿದ ಡಾಕ್ಟರ್ ಆತ್ಮಹತ್ಯೆಗೈದ ಘಟನೆ ನಡೆದಿದೆ. ಮಲಪ್ಪುರಂ ಮಂಜೇರಿ ಮೆಡಿಕಲ್ ಕಾಲೇಜಿನ ಫಿಸಿಕಲ್ ಮೆಡಿಸಿನ್ ಅಂಡ್ ರಿಹಾಬಿಲಿಟೇಶನ್ ವಿಭಾಗದ ಸೀನಿಯರ್ ರಸಿಡೆಂಟ್, ವಳಾಂಜೇರಿ ಡಾ.ಸಾಲಿಖ್ ಮುಹಮ್ಮದರ ಪತ್ನಿ ಸಿ.ಕೆ.ಫರ್ಸೀನ(35) ಆತ್ಮಹತ್ಯೆಗೈದ ಯುವ ಡಾಕ್ಟರ್. ನಿನ್ನೆ (ಸೋಮವಾರ) ಸಂಜೆ 5 ಗಂಟೆಯ ವೇಳೆ ಇವರ ಮೃತದೇಹ ವಸತಿಯಲ್ಲಿ ಮಲಗುವ ಕೋಣೆಯಲ್ಲಿ ಳಳಲ ಪತ್ತೆಯಾಗಿದೆ. ನಿನ್ನೆ ಸಂಜೆ 4 ಗಂಟೆಯ ವೇಳೆ ಗೆಳೆಯರ ವಾಟ್ಸಾಪ್ ಗ್ರೂಪಿನಲ್ಲಿ 'ಜೀವನ ಕೊನೆಗೊಳಿಸುತ್ತಿದ್ದೇನೆ' ಎಂಬ ಸಂದೇಶ ಹಾಕಿದ್ದರು. ಇದೇ ಸಂದೇಶವನ್ನು ವಾಟ್ಸಾಪ್ ಸ್ಟೇಟಸ್ ಆಗಿಯೂ ಹಾಕಿದ್ದರು. ಅನಂತರ ಬಂದು ನೋಡಿದಾಗ ಮೃತದೇಹ ಕಂಡು ಬಂದಿದೆ.

Post a Comment

0 Comments