Ticker

6/recent/ticker-posts

ಪೆರ್ಲದಲ್ಲಿ ಡಿವೈಎಫ್ ಐ ಕುಂಬಳೆ ಬ್ಲಾಕ್ ಸಮಿತಿಯಿಂದ ಸಮರ ಸಂಗಮ

 


ಪೆರ್ಲ ' ನಮಗೆ ಉದ್ಯೋಗ ಬೇಕು  ನಮಗೂ ಮತೀಯ ಸಾಮರಸ್ಯದ ಭಾರತ ಬೇಕು ಎಂಬ ಘೋಷಣೆಯೊಂದಿಗೆ  ಡಿವೈಎಫ್ ಐ ಕುಂಬಳೆ ಬ್ಲಾಕ್ ಸಮಿತಿಯ ನೇತೃತ್ವದಲ್ಲಿ ಆಯೋಜಿಸಿದ್ದ ಸಮರ ಸಂಗಮ ಪೆರ್ಲ ಪೇಟೆಯಲ್ಲಿ ನಡೆಯಿತು. 

ಬ್ಯಾಂಡ್ ವಾದ್ಯ ಮೇಳದೊಙದಿಗೆ ಆರಂಭಗೊಂಡ  ಯುವಜನ ರಾಲಿಯಲ್ಲಿ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

 ಬಳಿಕ  ಪೆರ್ಲ ಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುಡಿ ವೈ ಎಫ್ ಐ ಜಿಲ್ಲಾ ಅಧ್ಯಕ್ಷ ಅಡ್ವ. ಶಾಲು ಮ್ಯಾಥ್ ಉದ್ಘಾಟಿಸಿದರು.ಜಿಲ್ಲಾ ಸಮಿತಿ ಸದಸ್ಯ ರಂಜಿತ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾರ್ಯದರ್ಶಿ ನಾಸರುದ್ಧೀನ್ ಮಲಂಗರೆ ಸ್ವಾಗತಿಸಿದರು.

ಬ್ಲೋಕ್ ಕೋಶಾಧಿಕಾರಿ ಸಚಿನ್ ಬ್ಲಾಕ್ ಸಮಿತಿ ಸದಸ್ಯರಾದ ಮನೀಶ್, ರಂಜಿತ, ಮಜೀದ್, ವಿಶ್ವರಾಜ್, ನಸೀರ್ ಪೆರ್ಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೂತ್ತುಪರಂಪ್ ಹೋರಾಟಗಾರ ಸ. ಪುಷ್ಪನ ಸಮಗ್ರ ಜೀವಚರಿತ್ರೆ ಭಾನುಪ್ರಕಾಶ್ ರಚಿಸಿ ಯುವಧಾರ ಪಬ್ಲಿಷರ್ಸ್ ಪ್ರಕಟಿಸಿದ 'ಸಖಾವ್ ಪುಷ್ಪನ್' ಪುಸ್ತಕದ ಪ್ರಕಾಶನವನ್ನು ಮಾಧ್ಯಮ ಕಾರ್ಯಕರ್ತ ಮತ್ತು ಬ್ಲಾಕ್ ಸಮಿತಿಯ ಸದಸ್ಯರಾದ ಮನೀಶ್‌ಗೆ ನೀಡಲಾಯಿತು..

Post a Comment

0 Comments