ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ ವತಿಯಿಂದ ಸ್ವಾತಂತ್ರ್ಯ ದಿನ ಸಂಗಮ ಕಾರ್ಯಕ್ರಮ ಅಭೂತಪೂರ್ವವಾಗಿ ಜರಗಿತು.
ಇದರ ಅಂಗವಾಗಿ ವರ್ಣಮಯ ಮೆರವಣಿಗೆ ಪಂಚಾಯತು ಕಚೇರಿ ಪರಿಸರದಿಂದ ಸಾಗಿ ಬಂದು ಪೆರ್ಲ ಪೇಟೆಯಲ್ಲಾಗಿ ಭಾರತೀ ಸದನದಲ್ಲಿ ಸಂಪನ್ನಗೊಂಡಿತು.ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಎನ್ ಸಿ ಸಿ ಪೇರೆಡ್ ಬ್ಯಾಂಡ್ ವಾದ್ಯ ಮೇಳ ಹಾಗೂ ರುದ್ರ ಸೇರಾಜೆ ಅವರ ನಾಸಿಕ್ ಬ್ಯಾಂಡ್, ಪೆರ್ಲ ಶಾಲಾ ಎನ್ ಸಿಸಿ ಕೇಡೆಟ್ ಗಳು,ಶೇಣಿ ಶಾಲಾ ಸ್ಕೌಟ್ ಎಂಡ್ ಗೈಡ್ಸ್, ನಾಲಂದ ಕಾಲೇಜಿನ ಎನ್ನೆಸ್ಸಸ್ ಕಾರ್ಯಕರ್ತರು, ಅಂಗನವಾಡಿ, ಆಶಾ, ಹರಿತ ಕರ್ಮ ಕಾರ್ಯಕರ್ತರು ಮೆರವಣಿಗೆಗೆ ಕಳೆ ಏರಿಸಿದ್ದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ, ಜಿಲ್ಲಾ ಪಂ.ಸದಸ್ಯ ನಾರಾಯಣ ನಾಯ್ಕ, ಬ್ಲೋಕ್ ಪಂ.ಸದಸ್ಯರಾದ ಅನಿಲ್ ಕುಮಾರ್ ಕೆ.ಪಿ, ಬಟ್ಟು ಶೆಟ್ಟಿ , ಎಣ್ಮಕಜೆ ಪಂ.ಸದಸ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿನಿವೃತ್ತ ಜನಾನುರಾಗಿ ವೈದಾಧಿಕಾರಿ ಡಾ.ಕೇಶವ ನಾಯ್ಕ್ ಖಂಡಿಗೆ, ತೆಂಕು - ಬಡಗು ಯಕ್ಷಗಾನ ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ, ನಿವೃತ್ತ ಭಾರತೀಯ ವಾಯು ಪಡೆ ಅಧಿಕಾರಿ ಸಂಶುದ್ದೀನ್, ಸಾಮಾಜಿಕ ಮುಂದಾಳು ಜೋಸ್ ಚೆಂಬೊಟ್ಟಿಕಲ್, ಸ್ವಚ್ಛತಾ ಕಾರ್ಯಕರ್ತ ಸುಂದರ ಕೆ.ತೋರಣಮೂಲೆ, ಮಾಪ್ಪಿಳಪ್ಪಾಟ್ ಗಾಯಕ ಜಬ್ಬಾರ್ ಉಕ್ಕಿನಡ್ಕ ಅವರನ್ನು ಸನ್ಮಾನಿಸಲಾಯಿತು. ಯುವ ಪ್ರತಿಭಾ ಸಾಧಕರಾದ ಸಂಶೋಧನ ಡಾಕ್ಟರೇಟ್ ಪದವಿ ಪಡೆದ ಮಹಮ್ಮದಾಲಿ ಬಲ್ತಕಲ್ಲು, ಕು.ಶಿಲ್ಪಾ ಎಂ.ಪಿ.ಬೈರಡ್ಕ,
ಹೈಯರ್ ಸೆಕೆಂಡರಿ ಕಾಮರ್ಸ್ ವಿಭಾಗದಲ್ಲಿ ಪೂರ್ಣ ಅಂಕ ಗಳಿಸಿದ ಶ್ರೀರಂಜಿನಿ, ಅರ್ಥಶಾಸ್ತ್ರ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಗಳಿಸಿದ ಸ್ವಾತಿ ಬಿ.ಕೆ, ಬಿಎಸ್ಸಿ ಪದವಿ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆದ ಜಿವಿತಾ ಎಸ್.ಕೆ ಸ್ವರ್ಗ, ಹಾಗೂ ಎಸ್ಸಸ್ಸೆಲ್ಸಿ ಮತ್ತು ಪ್ಲಸ್ ಟು ವಿನಲ್ಲಿ ಎಪ್ಲಸ್ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು,. ಗರಿಷ್ಠ ಸಾಧನೆ ತೋರಿದ ಸೇವಾ ಸಂಸ್ಥೆ,ಶಿಕ್ಷಣ ಸಂಸ್ಥೆಗಳನ್ನು ಅಭಿನಂದಿಸಲಾಯಿತು.
ಪಂ.ಕಾರ್ಯದರ್ಶಿ ಶಾನವಾಸ್ ಸ್ವಾಗತಿಸಿ ಪಂ.ಪ್ರಾಥಮಿಕ ಶಿಕ್ಷಣ ಅಭಿವೃದ್ಧಿ ಸಮಿತಿಯ ರಾಜೇಶ್ ಮಾಸ್ತರ್ ಬಜಕೂಡ್ಲು ವಂದಿಸಿದರು. ಶಿಕ್ಷಕ ಆಶ್ರಫ್ ಮರ್ತ್ಯ ನಿರೂಪಿಸಿದರು.

0 Comments