Ticker

6/recent/ticker-posts

ವಸತಿಗೃಹದಲ್ಲಿ 10 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು 13 ವರ್ಷಗಳ ಬಳಿಕ ಆಂದ್ರಪ್ರದೇಶದಿಂದ ಸೆರೆ


 ಕಾಸರಗೋಡು: ಕಾಞಂಗಾಡ್ ಆವಿಕ್ಕರೆಯಲ್ಲಿ ವಸತಿಗೃಹದಲ್ಲಿ 10 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಲೆಗೈದ ಆರೋಪಿಯನ್ನು 13 ವರ್ಷಗಳ ಬಳಿಕ ಬಂಧಿಸಲಾಗಿದೆ. ಕರ್ಣಾಟಕ ಬಾಗೇಪಳ್ಳಿ ಜೂವಲ್ಪಾಳಿಯ ನಿವಾಸಿ ಸಹೀರ್ ಅಹಮ್ಮದ್ (48) ಬಂಧಿತ ಆರೋಪಿ. ಹೊಸದುರ್ಗ ಪೊಲೀಸರು ಈತನನ್ನು ಆಂದ್ರಪ್ರದೇಶದಿಂದ ಬಂಧಿಸಿದ್ದಾರೆ.

   2008 ಎಪ್ರಿಲ್ 17 ರಂದು ಬಾಲಕನ ಕೊಲೆ ನಡೆದಿತ್ತು. ಕರ್ಣಾಟಕದಿಂದ ಕಾಞಂಗಾಡಿಗೆ ಹೂ ಮಾರಲು ಬಂದಿದ್ದ ಕುಟುಂಬ ಆವಿಕ್ಕರೆಯ ವಸತಿಗೃಹದಲ್ಲಿ ವಾಸಿಸುತ್ತಿತ್ತು. ಈ ಕುಟುಂಬ ಹೊರಕ್ಕೆ ಹೋಗಿದ್ದಾಗ ಕೋಣೆಯೊಳಗೆ ಆಗಮಿಸಿದ ಆರೋಪಿ ಸಹೀರ್ ಅಹಮದ್, 10 ವರ್ಷದ ಬಾಲಕ ಸುನಿಲ್ ನನ್ನು ಕತ್ತು ಹಿಸುಕಿ ಕೊಲಯಗೈದು 8500 ರೂ ತೆಗೆದು ಪರಾರಿಯಾಗಿದ್ದನು. ಅನಂತರ ಪೊಲೀಸರು ಸಹೀರ್ ಅಹಮದ್ ನನ್ನು ಬಂಧಿಸಿದ್ದರೂ ಜಾಮೀನು ಪಡೆದು ನಾಪತ್ತೆಯಾಗಿದ್ದನು. ಈ ಹಿನ್ನೆಲೆಯಲ್ಲಿ ಕಾಸರಗೋಡು ಪೊಲೀಸರು ಆತನ ಬಂಧನಕ್ಕಾಗಿ ಪ್ರಯತ್ನಿಸಿದರು. ಈತ ಹೊಸ ಮೊಬೈಲ್ ಸಿಮ್ ಪಡೆದಾಗ ಸೈಬರ್ ಪೊಲೀಸರು ಈತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ

Post a Comment

0 Comments