ಬದಿಯಡ್ಕ: ಜೀರ್ಣೋದ್ಧಾರದ ಅಂತಿಮ ಹಂತದಲ್ಲಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬಾಲಾಲಯ ಪ್ರತಿಷ್ಠೆಯ ಪೂರ್ವಭಾವಿಯಾಗಿ ಶನಿವಾರ ಬೆಳಗ್ಗೆ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ತತ್ವಹೋಮ, ತತ್ವಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಪರಿಕಲಶ ಪೂಜೆ, ಕಲಶಾಭಿಷೇಕ ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ಜರಗಿತು.
ಭಾನುವಾರ ಪ್ರಾತಃಕಾಲ 3 ಗಂಟೆಯಿಂದ ಗಣಪತಿ ಹೋಮ, ಪ್ರತಿಷ್ಠಾಪಾಣಿ, ಪ್ರಾತಃಕಾಲ 4.09ರಿಂದ 4.45ರ ಕರ್ಕಟಕ ಲಗ್ನ ಸುಮುಹೂರ್ತದಲ್ಲಿ ಶ್ರೀದೇವರ ಬಾಲಾಲಯ ಪ್ರತಿಷ್ಠೆ, ಕಲಶಾಭಿಷೇಕ. ಬೆಳಗ್ಗೆ 9ರಿಂದ ಶಕ್ತಿಪಂಚಾಕ್ಷರಿ ಯಾಗ ಆರಂಭ, 11.30ಕ್ಕೆ ಯಾಗ ಪೂರ್ಣಾಹುತಿ, 11.45ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
0 Comments