Ticker

6/recent/ticker-posts

Ad Code

ತಿರುವನಂತಪುರಂ ಪೀರುಮೇಡು ವಿಧಾನಸಭಾ ಕ್ಷೇತ್ರದ ಶಾಸಕ, ಸಿಪಿಐ ನೇತಾರ ವಾಯೂರ್ ಸೋಮನ್ ಹೃದಯಾಘಾತದಿಂದ ನಿಧನ


 ತಿರುವನಂತಪುರಂ: ತಿರುವನಂತಪುರಂ ಪೀರುಮೇಡು ವಿಧಾನಸಭಾ ಕ್ಷೇತ್ರದ ಶಾಸಕ, ಸಿಪಿಐ ನೇತಾರ ವಾಯೂರ್ ಸೋಮನ್ (72) ನಿಧನರಾದರು. ಇಂದು (ಗುರುವಾರ) ಬೆಳಗ್ಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಅವರು ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ  ನಿಧನರಾಗಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪೀರುಮೇಡು ಕ್ಷೇತ್ರದಿಂದ ಕೇರಳ ವಿಧಾನಸಭೆಗೆ ಆಯ್ಕೆಯಾದ ಅವರು ವೇರ್ ಹೌಸಿಂಗ್ ಕೋರ್ಪರೇಶನ್ ಅಧ್ಯಕ್ಷ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಂಬೀ ಹುದ್ದೆಗಳನ್ನು ವಹಿಸಿದ್ದರು. ಮೃತರು ಪತ್ನಿ ಬಿಂದು, ಮಕ್ಕಳಾದ ಅಡ್ವ.ಶೋಬಿತ್, ಅಡ್ವ.ಶೋಬಿನ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments