Ticker

6/recent/ticker-posts

Ad Code

25 ಮಂದಿ ಮುತ್ತೈದೆಯರಿಗೆ ಬಾಗಿನ ಸಮರ್ಪಿಸಿ ಹೊಳ್ಳ ದಂಪತಿಗಳ ವೈವಾಹಿಕ ರಜತ ಸಂಭ್ರಮ


 ಕಾಸರಗೋಡು :  ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮುಂದಾಳು ಡಾl ಕೆ. ಎನ್ ವೆಂಕಟ್ರಮಣ ಹೊಳ್ಳ - ರೂಪಕಲಾ ದಂಪತಿಗಳ ವಿವಾಹದ 25ನೇ ವರ್ಷಾರಣೆ, ವಿವಾಹ ರಜತ ಸಂಭ್ರಮ ಕಾರ್ಯಕ್ರಮ, ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ  ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೊಳ್ಳ ದಂಪತಿಗಳು ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿಗಳಿಗೆ ವಸ್ತ್ರ ಸಂಹಿತೆಗಳೊಂದಿಗೆ ಬಾಗಿನ ಸಮರ್ಪಿಸಿ ಗೌರವಿಸಿದರು. ಸುಮಾರು 25 ಮಂದಿ ಮುತ್ತೈದೆಯರಿಗೆ "ಬಾಗಿನ ಸಮರ್ಪಣೆ" ಮಾಡಿದರು. ಹೊಳ್ಳ ದಂಪತಿಗಳ ಅಪಾರ ಅಭಿಮಾನಿಗಳು ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿನಂದಿಸಿದರು.  

    ಕಾರ್ಯಕ್ರಮದಲ್ಲಿ ಶ್ರೀ ಗುರುರಾಜ್ ಕಾಸರಗೋಡು ಸಾರಥ್ಯದ "ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ತಂಡದ ನೃತ್ಯ ವೈಭವ, ಶ್ರೀ ವಿಷ್ಣು ಪ್ರಿಯ ಮಹಿಳಾ ಸಂಘ, ಕೀಕಾನ ಇವರ ನೃತ್ಯ, ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು. ಕನ್ನಡ ಭವನ ವತಿಯಿಂದ 25ನೇ ವರ್ಷದ ನವ ದಂಪತಿಗಳಿಗೆ ವಿಶೇಷ ಸನ್ಮಾನ ನಡೆಯಿತು. ಕಾಸರಗೋಡು ಜಿಲ್ಲೆಯ ಹಾಗೂ ಕನ್ನಡ ಭವನದ ಕೊಡಗು ಜಿಲ್ಲಾ ಘಟಕ, ದ. ಕ. ಜಿಲ್ಲಾ ಘಟಕ, ಕೋಲಾರ ಜಿಲ್ಲಾ ಘಟಕ, ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ನಿರ್ದೇಶಕರಾಗಿರುವ ಕೇರಳ ರಾಜ್ಯ-ಕನ್ನಡ ಚುಟುಕು ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದರು. ಡಾl ವಾಮನ್ ರಾವ್ ಬೇಕಲ್ ಸ್ವಾಗತಿಸಿ ಜಯಾನಂದ ಕುಮಾರ್, ಉಷಾಕಿರಣ್, ಸಂಧ್ಯಾರಾಣಿ ಟೀಚರ್ ಕಾರ್ಯಕ್ರಮ ನಿರೂಪಿಸಿ ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.

Post a Comment

0 Comments