Ticker

6/recent/ticker-posts

Ad Code

ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ 7.11ಕೋಟಿ ಹಣ ದರೋಡೆ ಪ್ರಕರಣ 3 ದಿನಗಳೊಳಗೆ 8 ಮಂದಿ ಸೆರೆ

 

 
ಬೆಂಗಳೂರು :ಸಿಲಿಕಾನ್ ಸಿಟಿಯಲ್ಲಿ ನಡೆದ 7 ಕೋಟಿ 11 ಲಕ್ಷ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಒಟ್ಟು ಐದೂವರೆ ಕೋಟಿ ಹಣ ವಶಪಡಿಸಿಕೊಂಡಿದ್ದಾರೆ. ಉಳಿದ ಹಣದ ಬಗ್ಗೆ ಪೊಲೀಸರು ಶೋಧ ನಡೆಸುತ್ತಿದ್ದು, ಚೆನ್ನೈ ಕಡೆ ಒಂದೂವರೆ ಕೋಟಿ ತೆಗೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಇದರ ಜೊತೆಗೆ ಈವರೆಗೆ ಒಟ್ಟು 8 ಮಂದಿಯನ್ನು ಬಂಧಿಸಿರುವ ಬಗ್ಗೆ ಮಾಹಿತಿ ಇದೆ. ಸಿಎಂಎಸ್ ನ ನಾಲ್ಕು ಜನ ಸಿಬ್ಬಂದಿ, ಕಾನ್ಸ್‌ಟೇಬಲ್ ಅಣ್ಣಪ್ಪ, ಸಿಎಂಎಸ್ ಮಾಜಿ ಸಿಬ್ಬಂದಿ ಝೆವಿಯರ್, ದರೋಡೆಗೆ ಬಳಸಿದ್ದ ಕಾರು ನೀಡಿದ್ದ ಕಲ್ಯಾಣ ನಗರದ ಇಬ್ಬರು ಸೇರಿ ಒಟ್ಟು 8 ಜನರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದರೋಡೆಗೆ ಬಳಸಿದ್ದ ಶಂಕಿತ ಇನೋವಾ ಕಾರು ಚಿತ್ತೂರು ಬಳಿ ಪತ್ತೆಯಾಗಿದೆ. ನವೆಂಬರ್ 19ರಂದು ಯದೇವ ಡೇರಿ ಸರ್ಕಲ್ ಬಳಿ ಜನನಿಬಿಡ ಪ್ರದೇಶದಲ್ಲಿ ಈ ದರೋಡೆ ನಡೆದಿದ್ದು, ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರ ಗ್ಯಾಂಗ್ ಏಕಾಏಕಿ ಎಟಿಎಂಗೆ ಹಣ ಹಾಕಲು ಹೊರಟಿದ್ದ ವಾಹನ ತಡೆದು 7.11 ಕೋಟಿ ರೂಪಾಯಿ ಹಣ ದರೋಡೆ ಮಾಡಿ ಪರಾರಿಯಾಗಿತ್ತು. ಬೆಂಗಳೂರಿನ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

Post a Comment

0 Comments