Ticker

6/recent/ticker-posts

Ad Code

ಬಿಜೆಪಿ ಅಭಿವೃದ್ಧಿ ಯೋಜನೆಗಳ ಅಜೆಂಡಾ ಮೂಲಕ ಚುನಾವಣೆ ಎದುರಿಸಲಿದೆ : ಮೀಟ್ ದಿ ಪ್ರೆಸ್ ನಲ್ಲಿ ಎಂ.ಟಿ.ರಮೇಶ್

 

ಕಾಸರಗೋಡು : ಕೇರಳದ ಸ್ಥಳೀಯಾಡಳಿತ ಚುನಾವಣೆಯನ್ನು ಬಿಜೆಪಿ ಅಭಿವೃದ್ಧಿ ಯೋಜನೆಗಳ ಅಜೆಂಡಾ ಮೂಲಕ ಎದುರಿಸುತ್ತಿದೆ. ಆದರೆ ಕೇರಳವನ್ನಾಳಿದ ಎಡ ಬಲ ರಂಗಗಳು ಈ ವಿಷಯದಲ್ಲೊಂದು ಸಂವಾದಕ್ಕೆ ಮುಂದಾಗುತ್ತಿಲ್ಲ. ಅಭಿವೃದ್ಧಿ ಯೋಜನೆಗಳ ರಾಜಕೀಯ ಸಂವಾದ ನಡೆಯಬೇಕೆಂಬುದೇ ಬಿಜೆಪಿ ಬಯಕೆ. ಆದರೆ ರಾಜ್ಯ ಸರಕಾರ ಸ್ಥಳೀಯಾಡಳಿತದಲ್ಲಿ ನಡೆದ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದೆ. ತ್ರಿಸ್ತರ ಪಂಚಾಯತ್ ಗಳಲ್ಲಿ ನಡೆದ ಭ್ರಷ್ಟಾಚಾರದ ಆರೋಪಿಗಳನ್ನು ಕಾಪಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಟಿ. ರಮೇಶ್ ಕಾಸರಗೋಡಿನ ಮೀಟ್ ದಿ ಪ್ರೆಸ್ ನಲ್ಲಿ  ಆರೋಪಿಸಿದರು. ಸ್ಥಳೀಯಾಡಳಿತ ಚುನಾವಣಾ ಸಂದರ್ಭದಲ್ಲಿ ಶಬರಿಮಲೆ ವಿವಾದದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಸರಕಾರ ಶಾಸಕ ರಾಹುಲ್ ಮಾಮ್ ಕೂಟತ್ತಿಲ್ ಪ್ರಕರಣವನ್ನು ಬಳಸಿಕೊಂಡಿದೆ. ಇಂದೀಗ ರಾಹುಲ್ ಬಂಧನಕ್ಕೆ ಹೖಕೋರ್ಟು ತಡೆಯಾಜ್ಞೆ ವಿಧಿಸಿದೆ. ಆದರೆ ಪ್ರಕರಣದಲ್ಲಿ ದೂರು ಸಲ್ಲಿಸಲ್ಪಟ್ಟ ಬಳಿಕ ಕಳೆದ 9ದಿನದಲ್ಲಿ ಬಂಧಿಸಬಹುದಾಗಿದ್ದರೂ ಸರಕಾರವೇಕೆ ಬಂಧಿಸಲಿಲ್ಲ? ಇದು ಚುನಾವಣೆಯನ್ನು ಗಮನದಲ್ಲಿಟ್ಟು ಸಿಪಿಎಂ ನಡೆಸಿದ ನಾಟಕ ಎಂದು ಎಂ. ಟಿ. ರಮೇಶ್ ಆರೋಪಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉಪಸ್ಥಿತರಿದ್ದರು.

Post a Comment

0 Comments