ಕಾಸರಗೋಡು : ತ್ರಿಸ್ತರ ಪಂಚಾಯತು ಚುನಾವಣೆಯ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳನ್ನು ಮತ ಯಂತ್ರಗಳಲ್ಲಿ ನಮೂದಿಸುವ ಕಾರ್ಯ ಭರದಿಂದ ಸಾಗಿದೆ. ಚುನಾವಣಾ ಸ್ಟ್ರಾಂಗ್ ರೂಮ್‌ಗಳಲ್ಲಿ ಸಂಗ್ರಹಿಸಲಾದ ಎಲೆಕ್ಟ್ರಾನಿಕ್ ಮತ ಪೆಟ್ಟಿಗೆಗಳಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಮೂದೀಕರಣ ಪ್ರಕ್ರಿಯೆ ನಡೆಯುತ್ತಿದೆ. ಪೂರ್ಣಗೊಂಡ ಇ.ವಿ.ಎಂ ಯಂತ್ರಗಳನ್ನು ಡಿಸೆಂಬರ್ 10 ರಂದು ಮತದಾನಕ್ಕಾಗಿ ಮತಗಟ್ಟೆಗಳಿಗೆ ಕರೆದೊಯ್ಯಲು ಮತಗಟ್ಟೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ. ಪ್ರಾರಂಭದಲ್ಲಿ ಇ.ವಿ.ಎಂ. ಅಣಕು ಸಮೀಕ್ಷೆಯನ್ನು ನಡೆಸಲಾಯಿತು. ಚುನಾವಣಾ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾರಂಭಿಸಲಾಯಿತು.

0 Comments