Ticker

6/recent/ticker-posts

Ad Code

ಮದುವೆ ಆಗುವುದಾಗಿ ನಂಬಿಸಿ ಮೋಸಗೈದ ವಕೀಲನ ವಿರುದ್ಧ ಕೋರ್ಟ್ ಮೆಟ್ಟಲೇರಿದ ವಕೀಲೆ

 

ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಲೀಗಲ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ವಕೀಲೆಯೋರ್ವರು ಸಹೋದ್ಯೋಗಿಯಾಗಿರುವ ವಕೀಲನಿಂದ ಮೋಸ ಹೋಗಿ ನ್ಯಾಯಾಲಯದ ಮೆಟ್ಟಲೇರಿದ ಪ್ರಕರಣ ವರದಿಯಾಗಿದೆ. ಕಾಜಲ್ ಪ್ರಸಾದ್ (29) ಎಂಬುವರೇ ವಂಚನೆಗೆ ಒಳಗಾದವರು. ಖಾಸಗಿ ಕಂಪೆನಿಯೊಂದರಲ್ಲಿ ಕಾಜಲ್ ಪ್ರಸಾದ್ ರವರು ಲೀಗಲ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದು ವಕೀಲ ನವೀನ್ ಪೊನ್ನಯ್ಯ ಜೊತೆ ಹಲವು ವರ್ಷಗಳಿಂದ ಪರಿಚಯ ಇತ್ತು. ನವೀನ್ ಪೊನ್ನಯ್ಯ ರವರು ತಮ್ಮ ಪತ್ನಿ ಜೊತೆ ಹೊಂದಾಣಿಕೆ ಇಲ್ಲವೆಂದು ಕಾರಣ ನೀಡಿ ವಿಚ್ಛೇದನ ಪಡೆದಿರುವುದಾಗಿ ಹೇಳಿ ಕಾಜಲ್ ಪ್ರಸಾದ್ ಜೊತೆ ಹೆಚ್ಚು ಒಡನಾಟ ಬೆಳೆಸಿಕೊಂಡಿದ್ದರು. ಈ ನಡುವೆ ನವೀನ್ ಪೊನ್ನಯ್ಯರವರ ತಾಯಿ ಕುಮಾರಿಯವರು ಕಾಜಲ್ ಪ್ರಸಾದ್ ರವರ ಮನೆಗೆ ಬಂದು ಮದುವೆ ಪ್ರಸ್ತಾಪ ಮಾಡಿ ಎಂಗೇಜ್ ಮೆಂಟ್ ಮಾಡಿಕೊಂಡು ಡಿಸೆಂಬರ್ 7 ರಂದು ವಿವಾಹ ನಿಶ್ಚಯಿಸಿದ್ದಾರೆ. ಮದುವೆ ಫಿಕ್ಸ್ ಆದ ಹಿನ್ನಲೆ ಇಬ್ಬರೂ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾರೆ. ಕೆಲವು ದಿನಗಳ ಹಿಂದೆ ನವೀನ್ ಪೊನ್ನಯ್ಯ ಮೊಬೈಲ್ ಮೂಲಕ ನನಗಿನ್ನೂ ವಿಚ್ಛೇದನ ಆಗಿಲ್ಲ, ಪರಿಹಾರ ಕಂಡುಕೊಳ್ಳುವುದಾಗಿ ಹಾಗೂ ನಮ್ಮ ಯೋಜನೆಯಂತೆ ಮದುವೆ ನಡೆಯಲಿದೆ ಎಂದು ಮೆಸೇಜ್ ಮಾಡಿ ಸ್ವಿಚ್ ಆಫ್ ಮಾಡಿದ್ದಾರೆ. ಇದೀಗ ಮದುವೆ ಆಮಂತ್ರಣ ಪತ್ರಿಕೆಗಳನ್ನು ವಿತರಿಸಲಾಗಿದೆ. ಆದರೆ ನವೀನ್ ಪೊನ್ನಯ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ. ತಂದೆ ತಾಯಿ ಜೊತೆ ಮಾತನಾಡಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೋರ್ಟ್ ನಿಂದ ಸುಳ್ಳು ವರದಿ ಪಡೆದು ನನ್ನನ್ನುಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿರುವ ನವೀನ್  ಹಾಗೂ ಇತರರ ಮೇಲೆ ಕಾನೂನು ಕ್ರಮಕ್ಕಾಗಿ ಕಾಜಲ್ ಪ್ರಸಾದ್ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments