Ticker

6/recent/ticker-posts

Ad Code

ರಾಜ್ಯ ಸರಕಾರದಿಂದ ಕೃಷಿ ನಾಶನಷ್ಟಕ್ಕೆ ಆರ್ಥಿಕ ನೆರವು ನೀಡಲು ಭಾರತೀಯ ಕಿಸಾನ್ ಸಂಘ ಒತ್ತಾಯ


 ಕಾಸರಗೋಡು : ಭಾರತೀಯ ಕಿಸಾನ್ ಸಂಘದ ಕೇರಳ ಪ್ರದೇಶ್ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆ ಎರ್ನಾಕುಳಂನಲ್ಲಿ ನಡೆಯಿತು. ಕಾಸರಗೋಡು ಜಿಲ್ಲೆಯಲ್ಲಿನ ಕೃಷಿಕರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗಿದ್ದು ಜಿಲ್ಲಾಧ್ಯಕ್ಷರಾದ ಪುರುಷೋತ್ತಮ, ಬೊಡ್ಡನಕೊಚ್ಚಿ ಮಾತನಾಡಿ, ಕೇಂದ್ರ ಸರಕಾರದ PMPBYಯ ಪ್ರಕಾರದಲ್ಲಿ ಕೃಷಿಕರಿಗೆ ಬೆಳೆಪರಿಹಾರ ನೀಡುವಂತೆ, ಕೇರಳ ರಾಜ್ಯ ಸರಕಾರವು ಕೂಡ ಇಲ್ಲಿನ ಕೃಷಿಯ ನಾಶನಷ್ಟಕ್ಕೆ ಆರ್ಥಿಕ ನೆರವು ನೀಡಬೇಕಾಗಿ  ಹಾಗೂ ರೈತರಿಗೆ ಸಹಾಯಧನವನ್ನು ಒದಗಿಸಬೇಕೆಂದು ಒತ್ತಾಯಿಸಲಾಯಿತು. ಕಾಸರಗೋಡು ಜಿಲ್ಲೆಯಲ್ಲಿನ  ಅಡಿಕೆ ಕೃಷಿಕರು  ಎದುರಿಸುವ ಸಮಸ್ಯೆಗಳಾದ ಅತಿವೃಷ್ಠಿಯಿಂದ ಮಹಾಳಿರೋಗ. ಎಲೆಚುಕ್ಕಿರೋಗ, ಹಳದಿರೋಗಗಳಿಂದ ಕಂಗಾಲಾಗಿದ್ದು, ಇದರ ಪರಿಹಾರಾರ್ಥ ಮನವಿ ಮಾಡಲಾಗಿದ್ದು, ಗಮನಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬಿಕೆಎಸ್  ನೇತೃತ್ವದಲ್ಲಿ ಇಲ್ಲಿನ ಕೃಷಿಕರು ಒಗ್ಗೂಡಿ ತೀವ್ರಹೋರಾಟ ನಡೆಸುವುದಾಗಿಯೂ, ತಮ್ಮ ಬೇಡಿಕೆಗಳನ್ನು ಈಡೇರಿಸುವ ದೃಷ್ಟಿಯಿಂದ, ಸಮಸ್ತ ಕೃಷಿಕರು ಸಂಘಟಿತರಾಗಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು. ಬಿಕೆಎಸ್ನ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ  ನಾಯಕರುಗಳು ಭಾಗವಹಿಸಿದ್ದ  ಸಭಾಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯಿಂದ ರಾಜ್ಯಉಪಾಧ್ಯಕ್ಷ ಯನ್. ರಾಮಮಾಸ್ಟರ್, ಜಿಲ್ಲಾ ಉಪಾಧ್ಯಕ್ಷ ಡಾ! ಶಿವರಾಯ ಭಟ್, ಜಿಲ್ಲಾಕಾರ್ಯದರ್ಶಿ ಯಂ. ಸಚಿನ್ ಕುಮಾರ್  ಉಪಸ್ಥಿತರಿದ್ದರು.

Post a Comment

0 Comments