ಕುಂಬಳೆ : ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಸಮೀಪದ ಅರಿಕ್ಕಾಡಿಯಲ್ಲಿ ನಿರ್ಮಿಸಿದ ಟೋಲ್ ಬೂತಿನಲ್ಲಿ ಭಾರೀ ವಿರೋಧದ ನಡುವೆ ಇಂದು ಮುಂಜಾನೆಯಿಂದ ಟೋಲ್ ಸಂಗ್ರಹ ಆರಂಭಿಸಿದ್ದು ಇದನ್ನು ಪ್ರತಿಭಟಿಸಿ ಕ್ರಿಯಾ ಸಮಿತಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಟೋಲ್ ಸಂಗ್ರಹ ಪ್ರಕರಣ ಹೈಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ಹೆದ್ದಾರಿ ಪ್ರಾಧಿಕಾರವು ಟೋಲ್ ಸಂಗ್ರಹವನ್ನು ಪ್ರಾರಂಭಿಸಿರುವುದನ್ನು ವಿರೋಧಿಸಿ ಜನ ರಸ್ತೆಯಲ್ಲಿ ಕುಳಿತು ಧರಣಿ ಆರಂಭಿಸಿದ್ದರು.
ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ ತಡೆದ ಕ್ರಿಯಾ ಸಮಿತಿ ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿ ಸ್ಥಳಾಂತರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಕೆಎಂ ಅಶ್ರಫ್, ಜಿಲ್ಲಾ ಪಂಚಾಯತ್ ಸದಸ್ಯ ಅಜೀಜ್ ಕಳತ್ತೂರ್ ಮತ್ತು ಇತರರನ್ನು ಪೊಲೀಸರು ಬಲವಂತವಾಗಿ ಬಂಧಿಸಿದ್ದು ಶಾಸಕರು ಸೇರಿದಂತೆ 60 ಜನರ ವಿರುದ್ಣ ಪ್ರಕರಣ ದಾಖಲಿಸಲಾಗಿದೆ.

0 Comments