Ticker

6/recent/ticker-posts

Ad Code

ಬದಿಯಡ್ಕದಲ್ಲಿ ದಲಿತ್ ಕಾಂಗ್ರೆಸ್ ನಿಂದ ಜನಪ್ರತಿನಿಧಿಗಳಿಗೆ ಅಭಿನಂದನೆ

 

ಬದಿಯಡ್ಕ : ಭಾರತೀಯ ದಲಿತ್ ಕಾಂಗ್ರೆಸ್ ನೇತೃತ್ವದಲ್ಲಿ ತ್ರಿಸ್ಥರ ಪಂಚಾಯತು ಚುನಾವಣೆಯಲ್ಲಿ ವಿಜೇತರಾದ ಬದಿಯಡ್ಕ ಗ್ರಾಮ ಪಂಚಾಯತಿನ ವಿವಿಧ ವಾರ್ಡುಗಳ ಜನಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಬದಿಯಡ್ಕ ಮಂಡಲ ಕಚೇರಿಯಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ್ ಕಾಂಗ್ರೆಸ್ ನ ಬದಿಯಡ್ಕ ಮಂಡಲ ಸಮಿತಿ ಅಧ್ಯಕ್ಷ ಗಂಗಾಧರ ಗೋಳಿಯಡ್ಕ ವಹಿಸಿದ್ದರು. ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಮುಖ್ಯ ಅತಿಥಿಯಾಗಿದ್ದರು. ದಲಿತ್ ಕಾಂಗ್ರೆಸ್ ಮಂಡಲ ಸಮಿತಿ ಕೋಶಾಧಿಕಾರಿ ಗೋಪಾಲ ದರ್ಬೆತ್ತಡ್ಕ ಅಭಿನಂದನಾ ಭಾಷಣ  ಮಾಡಿದರು. ದಲಿತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರಾಮ ಪಟ್ಟಾಜೆ, ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ಕೃಷ್ಣದಾಸ್ ದರ್ಬೆತ್ತಡ್ಕ  ಮಾತನಾಡಿದರು. ಕಾರ್ಯಕ್ರಮದಲ್ಲಿ  ಜನ ಪ್ರತಿನಿಧಿಗಳಾದ ಖಾದರ್ ಮಾನ್ಯ( ಕಾಸರಗೋಡು ಬ್ಲೋಕು ಬೇಳ ಡಿವಿಷನ್ ), ಶ್ಯಾಮ ಪ್ರಸಾದ್ ಮಾನ್ಯ( 17ನೇ ವಾರ್ಡು ), ಗಂಗಾಧರ ಗೋಳಿಯಡ್ಕ(14ನೇ ವಾರ್ಡು), ಲೀಲಾವತಿ (7ನೇ ವಾರ್ಡು), ಅಶ್ವತಿ (20ನೇ ವಾರ್ಡು), ಪ್ರಜ್ಞಾ (16ನೇ ವಾರ್ಡು) ಅವರನ್ನು ಅಭಿನಂದಿಸಲಾಯಿತು. ದಲಿತ್ ಕಾಂಗ್ರೆಸ್ ಮಂಡಲ ಸಮಿತಿ ಕಾರ್ಯದರ್ಶಿ ರಾಮ ಗೋಳಿಯಡ್ಕ ಸ್ವಾಗತಿಸಿ,  ಲೀಲಾ ಪಟ್ಟಾಜೆ ವಂದಿಸಿದರು.

Post a Comment

0 Comments