ಕಾಸರಗೋಡು : ಇತ್ತೀಚೆಗೆ ಬೆಂಕಿ ಆಕಸ್ಮಿಕ ಸಂಭವಿಸಿದ ಬೀರಂತಬೈಲು ಪುಷ್ಪ ಅವರ ಮನೆಯನ್ನು ಪುನರ್ ನಿರ್ಮಿಸುವ ಅಂಗವಾಗಿ ಶ್ರಮದಾನ ಮೂಲಕ ಸ್ಥಳವನ್ನು ಶುಚಿಗೊಳಿಸುವ ಕಾರ್ಯವು ನಡೆಯಿತು. 5ನೇ ವಾರ್ಡಿನ ಕೌನ್ಸಿಲ್ಲರ್ ಹರೀಶ್ ಮತ್ತು ವೀರ ಹನುಮಾನ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಬಿಲ್ಲವ ಸೇವಾ ಸಂಘದ ಗೌರವಾಧ್ಯಕ್ಷ ಎ ಕೇಶವ ಇವರ ಮುಂದಾಳುತ್ವದಲ್ಲಿ ಶ್ರೀ ವೀರ ಹನುಮಾನ್ ಪ್ರಾದೇಶಿಕ ಸಮಿತಿಯ ಹಾಗೂ ಸದಸ್ಯರ ಮೇಲ್ನೋಟದಲ್ಲಿ ರವಿವಾರದಂದು ಶುಚೀಕರಣ ಕಾರ್ಯ ನಡೆಸಲಾಯಿತು. ಮಾಜಿ ನಗರ ಸಭಾ ವಿಪಕ್ಷ ನಾಯಕ ರಮೇಶ, ಮಚೆಂದ್ರ, ಮಧು, ಹರೀಶ್ ಹಾಗೂ ಪರಿಸರದ ಹಲವು ಜನರು ಈ ಸೇವಾ ಕಾರ್ಯದಲ್ಲಿ ಭಾಗಿಗಳಾದರು.

0 Comments