ಬದಿಯಡ್ಕ: ಪೆರಡಾಲ ಗ್ರಾಮದ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶಕ್ಕಾಗಿ ದೂರದ ಮೖಸೂರಿನಲ್ಲಿ ಸಾವಯವ ತರಕಾರಿ ಕೃಷಿ ಕೈಗೊಳ್ಳುವ ಮೂಲಕ ಭಕ್ತರ ವಿವಿಧ ಸೇವೆಗಳು ಸಕ್ರಿಯವಾಗಿದೆ. ಮೖಸೂರಿನಲ್ಲಿ ಸಾವಯವ ತರಕಾರಿ ಕೃಷಿಗೆ ಬೀಜ ಹಸ್ತಾಂತರ ನಡೆಯಿತು. ಮೖಸೂರು ಸಜ್ಜೆಹುಂಡಿಯ ಹೊಂಬಾಳೇಶ್ವರ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಮೖಸೂರು ಮುಕ್ತ ವಿವಿ ರಿಜಿಸ್ಟ್ರಾರ್ ಡಾ. ನವೀನ್ ಕುಮಾರ್ ಬೀಜದಾನ ಉದ್ಘಾಟಿಸಿದರು. ಇದರಂತೆ 150 ಮಂದಿ ಕೃಷಿಕರಿಗೆ ಬೀಜ ಹಸ್ತಾಂತರವಾಗಿದೆ. ಇನ್ನು ಪೆರಡಾಲ ಬ್ರಹ್ಮಕಲಶಕ್ಕಾಗಿ ಇದೇ ಮೊದಲ ಬಾರಿಗೆ ಮೖಸೂರಿನಲ್ಲಿ ಬೀಜಬಿತ್ತನೆಯಾಗಿ ತರಕಾರಿ ಗಿಡ ಬೆಳೆಸುವ ಯೋಜನೆ ಅಪೂರ್ವವಾಗಿದೆ.
ದೇವಸ್ಥಾನದ ಆಡಳಿತ ಮೊಕ್ತೇಸರ ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸಿದರು. ಜ್ಯೋತಿಷಿ ಕುಂಜಾರು ವೆಂಕಟೇಶ್ವರ ಭಟ್ ಮೖಸೂರು, ಪ್ರಶಾಂತ್ ಗುರೂಜಿ ಮೖಸೂರು, ಪೆರಡಾಲ ಕ್ಷೇತ್ರದ ಆಡಳಿತ ಮೊಕ್ತೇಸರ, ನ್ಯಾಯವಾದಿ ವೆಂಕಟ್ರಮಣ ಭಟ್ ಚಂಬಲ್ತಿಮಾರ್, ಪೆರಡಾಲಗುತ್ತು ಜಗನ್ನಾಥ ರೈ, ಗಣೇಶ ಕೃಷ್ಣ ಅಳಕ್ಕೆ, ಗಣೇಶಪ್ರಸಾದ ಕಡಪ್ಪ ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಪುದುಕೋಳಿ. ಪ್ರಾಸ್ತಾವಿಕ ಮಾತನಾಡಿದರು. ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಶಿವರಾಮ ಭಟ್ ಪಟ್ಟಾಜೆ, ಭಾಸ್ಕರ ಪಂಜಿತಡ್ಕ ನಿರೂಪಿಸಿದರು.

0 Comments