ವಿಟ್ಲ : ಪಡ್ನೂರು ಗ್ರಾಮದ ಕಾಪು ಮಜಲು ಕೊಡಂಗಾಯಿ ಅಂಚೆ ಕಚೇರಿಯಿಂದ ಪುಡೇಮಜಲು ಅಂಗನವಾಡಿಯವರೆಗೆ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದು, ನಡೆದುಕೊಂಡು ಹೋಗುವ ನಾಗರಿಕರಿಗೆ ಇದು ತೀವ್ರ ಸಮಸ್ಯೆ ಸೃಷ್ಠಿಸುತ್ತಿದೆ. ರಸ್ತೆ ಬದಿ ಇದ್ದ ತೋಡುಗಳಿಗೆ ತ್ಯಾಜ್ಯವನ್ನು ಸುರಿದು ಇದು ಕಾಪುಮಜಲಿನ ದೈವಸ್ಥಾನದ ಭಂಡಾರದ ಮನೆಯ ಎದುರುಗಡೆಯಲ್ಲಿ ನೀರಿನಲ್ಲಿ ಸಾಗಿ ಕುಡಿಯುವ ನೀರಿನ ಮೂಲಕ್ಕೆ ಕೃಷಿ ಭೂಮಿಗೆ ಬಂದು ಬಿದ್ದರು ಯಾರು ಗಮನಹರಿಸುತ್ತಿಲ್ಲ. ಗ್ರಾಮ ಪಂಚಾಯಿತಿಗೆ ಇದರ ಬಗ್ಗೆ ದೂರುಗಳನ್ನು ನೀಡಿದರು ಸಾಕ್ಷಿ ಸಮೇತ ದೂರು ಕೊಡಿ ಎನ್ನುವುದರಿಂದ ಹೇಳುವರಿಲ್ಲ, ಕೇಳುವರಿಲ್ಲ ಎಂಬಂತೆ ಪಂಚಾಯತು ಸಹಿತ ತ್ಯಾಜ್ಯ ಸುರಿಯುವವರಿಗೆ ಪ್ರೋತ್ಸಾಹ ನೀಡಿದಂತಾಗಿದೆ.
ಗ್ರಾಮದ ಇಡೀ ಮನೆಗಳಿಗೂ ನೀರು ಹೋಗುವ ನೀರಿನ ಪಂಪ್ ನ ಎದುರೇ ಕಸ ತಂದು ಸುರಿದು ಹೋದರೂ ಇದಕ್ಕೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಮೌನವಾಗಿರುವುದು ಎಲ್ಲರ ಸಂಶಯಕ್ಕೆ ಕಾರಣವಾಗಿದೆ. ಅಧಿಕಾರಿಗಳೇ ಕ್ರಮ ಕೈಗೊಳ್ಳದಿದ್ದರೆ, ಮುಂದೊಂದು ದಿನ ಗ್ರಾಮದ ಜನಗಳಿಗೆ ಆರೋಗ್ಯ ಸಮಸ್ಯೆ ಉಂಟಾದಾಗ ಜವಾಬ್ದಾರಿಯುತ ಪಂಚಾಯತು ಅಧಿಕಾರಿಗಳೇ ಹೊಣೆಯಾಗಬೇಕಾದಿತು. ಇದರ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ನಾಡಿನ ಜನತೆ ಒಟ್ಟಾಗಿ ಆಂದೋಲನಕ್ಕೆ ಇಳಿಯಲು ನಿರ್ಧರಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.


0 Comments