Ticker

6/recent/ticker-posts

Ad Code

ದಂಪತಿಗಳು ಏಕಾಂತದಲ್ಲಿದ್ದಾಗ ರೂಮ್‌ಗೆ ನುಗ್ಗಿದ ಸಿಬ್ಬಂದಿ : ಹೋಟೆಲ್‌ಗೆ 10 ಲಕ್ಷ ದಂಡ ವಿಧಿಸಿದ ಗ್ರಾಹಕರ ಕೋರ್ಟ್

 

ಜೈಪುರ: ಹೋಟೆಲ್‌ ಸಿಬ್ಬಂದಿಯೊಬ್ಬರು ಮಾಡಿದ ಎಡವಟ್ಟಿಗೆ ಈಗ ಉದಯ್‌ಪುರ್ ಲೀಲಾ ಪ್ಯಾಲೇಸ್  ಹೋಟೆಲ್‌ಗೆ 10 ಲಕ್ಷ ರೂ. ದಂಡ ತೆರಬೇಕಾದ ಪರಿಸ್ಥಿತಿ ಬಂದೊದಗಿದೆ. ಐಷಾರಾಮಿ ಹೋಟೆಲ್‌ ರೂಮಿನಲ್ಲಿದ್ದ ದಂಪತಿಯು ಖಾಸಗಿ ಕ್ಷಣ ಕಳೆಯುತ್ತಿದ್ದಾಗ ಹೇಳದೇ ಕೇಳದೇ ಹೊಟೇಲ್ ಸಿಬ್ಬಂದಿ ಮಾಸ್ಟರ್‌ ಕೀ ಬಳಸಿ ಒಳ ನುಗ್ಗಿದ್ದು ತಮ್ನ ಖಾಸಗಿ ಕ್ಷಣಕ್ಕೆ ಧಕ್ಕೆಯುಂಟಾಗಿದೆ ಎಂದು ಚೆನ್ನೈ ಮೂಲದ ಮಹಿಳಾ ವಕೀಲರೊಬ್ಬರು ದಾಖಲಿಸಿದ್ದ ಕೇಸ್ ತೀರ್ಪಿನಲ್ಲಿ ಕೊಠಡಿಯ ಆ ದಿನದ ಬಾಡಿಗೆ 55 ಸಾವಿರ ರೂ. ಅದಕ್ಕೆ ಶೇ.9 ರಷ್ಟು ಬಡ್ಡಿ ಜೊತೆಗೆ ಕೋರ್ಟ್‌ನ ಖರ್ಚುವೆಚ್ಚಗಳಿಗಾಗಿ 10,000 ರೂ.ಗಳನ್ನು ನೀಡುವಂತೆ ಚೆನ್ನೈ ಉತ್ತರ ಜಿಲ್ಲಾ ಗ್ರಾಹಕರ ಕೋರ್ಟ್‌  ಆದೇಶಿಸಿದೆ. ಚೆನ್ನೈನ ಮಹಿಳಾ ವಕೀಲೆಯೊಬ್ಬರು ತಮ್ಮ ಪತಿಯೊಂದಿಗೆ ಹೋಟೇಲ್ ನಲ್ಲಿ  ತಂಗಿದ್ದು ಬಾಡಿಗೆ 55,000 ರೂ.ಗಳನ್ನು ಪಾವತಿಸಿದ್ದರು. ದಂಪತಿಗಳಿಬ್ಬರೂ ಸ್ನಾನಗೃಹದಲ್ಲಿದ್ದಾಗ ಹೋಟೆಲಿನ ಸರ್ವೀಸ್ ಸಿಬ್ಬಂದಿ ಆ ಕೊಠಡಿಯ ಮಾಸ್ಟರ್ ಕೀ ಬಳಸಿ, ಹೇಳದೇ ಕೇಳದೆ ಒಳಗೆ ನುಗ್ಗಿದ್ದ. ಸರ್ವೀಸ್‌ ಇಲ್ಲ ಅಂತಾ ಹೇಳಿದ್ರೂ, ಸ್ನಾನಗೃಹದಲ್ಲಿ ಇಣುಕಿದ್ದ. ಈ ಹಿನ್ನೆಲೆಯಲ್ಲಿ ಅವರು ಕೇಸ್ ದಾಖಲಿಸಿದ್ದರು.

Post a Comment

0 Comments