ಬದಿಯಡ್ಕ ; ಗ್ರಾಮ ಪಂಚಾಯತಿನ ಯುವ ಪೀಳಿಗೆಯ ಕ್ರೀಡಾಳುಗಳ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರವಹಿಸುವ ಆಟದ ಮೈದಾನಗಳನ್ನು ವಿಂಗಡಿಸಿ ನೀಡುವುದನ್ನು ತಡೆಯಬೇಕೆಂದು ಆಗ್ರಹಿಸಲಾಗಿದೆ. ಕೆಲವು ದಿನಗಳ ಹಿಂದೆ, ಬೇಳ ಗ್ರಾಮದಲ್ಲಿ ಮೂರು ದಶಕಗಳಿಂದ ಬಳಸಲಾಗುತ್ತಿರುವ ಆಟದ ಮೈದಾನವನ್ನು ಗ್ರಾಮಾಧಿಕಾರಿ ಅಳತೆ ಮಾಡಿ ವಿಂಗಡಿಸಿ ವಿತರಿಸಲು ಮುಂದಾಗಿದ್ದು ಇದನ್ನು ತಡೆಯಬೇಕೆಂದು ವಿಶ್ವ ಭಾರತಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಆಗ್ರಹಿಸಿದೆ. ಈ ಕ್ಲಬ್ ವಾಲಿಬಾಲ್ ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ಮಕ್ಕಳಿಗೆ ಕ್ರೀಡಾ ತರಬೇತಿಯನ್ನು ನೀಡುತ್ತಿದೆ. ಮಾತ್ರವಲ್ಲದೆ ಹಾಸಿಗೆ ಹಿಡಿದ ರೋಗಿಗಳು ಮತ್ತು ಅಸಹಾಯಕರಿಗೆ ಸಹಾಯ ಮಾಡುತ್ತಿದೆ. ಹೀಗಿರುವ ಕ್ಲಬ್ ಬಳಸುವ ಜಾಗವನ್ನು ಕಂದಾಯ ಅಧಿಕಾರಿಗಳು ಅತಿಕ್ರಮಣ ಮಾಡಲು ಸಿದ್ಧತೆ ನಡೆಸಿದ್ದು, ಇದನ್ನು ತಡೆಗಟ್ಟಬೇಕೆಂದು ಆಗ್ರಹಿಸಿ ವಾರ್ಡ್ ಸದಸ್ಯೆ ಅಶ್ವತಿ ಅಶೋಕನ್ ನೇತೃತ್ವದಲ್ಲಿ ಕ್ಲಬ್ ಪದಾಧಿಕಾರಿಗಳು, ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ. ಶಂಕರ ಅವರಿಗೆ ಮನವಿ ಸಲ್ಲಿಸಿದರು.

0 Comments