ಉಡುಪಿ: ದೆಹಲಿ ಮೂಲದ ದಾನಿಯೊಬ್ಬರು ನೀಡಿರುವ 2 ಕೋಟಿ ವೆಚ್ಚದ ಚಿನ್ನದ ಭಗವದ್ಗೀತೆ ಕೃಷ್ಣದೇವರಿಗೆ ಸಮರ್ಪಣೆಯಾಗಿದೆ. ಭಗವದ್ಗೀತೆಯ 18 ಅಧ್ಯಾಯಗಳನ್ನು ಚಿನ್ನದ ಹಾಳೆಗಳಲ್ಲಿ ಬರೆಯಲಾಗಿದೆ. ದೆಹಲಿ ಮೂಲದ ನಿವೃತ್ತ ಐಎಎಸ್ ಅಧಿಕಾರಿ ಎಸ್ ಲಕ್ಷ್ಮಿ ನಾರಾಯಣನ್ ಎಂಬವರು ಸುಮಾರು ಎರಡು ಕೋಟಿ ವೆಚ್ಚದಲ್ಲಿ ಈ ಅಪರೂಪದ ಗ್ರಂಥವನ್ನು ಕೃಷ್ಣಮಠಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪರಮಪೂಜ್ಯ ಶ್ರೀ ಪುತ್ತಿಗೆ ಮಠದ ಶ್ರೀಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸನ್ಯಾಸ ಜೀವನದ ಸುವರ್ಣ ಮಹೋತ್ಸವದ ಹಾಗೂ ಶ್ರೀಗಳ ಪರ್ಯಾಯದ ಅವಧಿಯನ್ನು ಭಗವದ್ಗೀತೆಯ ಪ್ರಚಾರಕ್ಕೆ ಬಳಸಿಕೊಂಡ ಶ್ರೀಗಳ ಮೂಲಕ ಇದೀಗ ಮತ್ತೊಂದು ಮಹತ್ವದ ಕೊಡುಗೆ ಸಮರ್ಪಣೆಯಾಗಿದೆ. ಸ್ವರ್ಣ ಗ್ರಂಥವನ್ನು ರಥ ಬೀದಿಯಲ್ಲಿ ಚಿನ್ನದ ಪಾರ್ಥ ಸಾರಥಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಕೃಷ್ಣದೇವರಿಗೆ ಸಮರ್ಪಣೆಯ ವೇಳೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.

0 Comments